ಕಡಬ : ಶ್ರೀ ರಾಮ ವಿದ್ಯಾಲಯ ನೆಲ್ಯಾಡಿ ವಿದ್ಯಾಲಯದ ವಿದ್ಯಾರ್ಥಿಗಳ ವಾರ್ಷಿಕ ಹಬ್ಬ ಪ್ರತಿಭೋತ್ಸವವು ಡಿ. 27 ರಂದು ಶ್ರೀ ರಾಮ ವಿದ್ಯಾಲಯ ಸೂರ್ಯನಗರದಲ್ಲಿ ಜರಗಲಿದೆ.

ಬೆಳಗ್ಗೆ 10. 30 ಗಂಟೆಗೆ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಆರಂಭವಾಗಲಿದೆ.

10.45 ಗಂಟೆಗೆ ಸರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಲಿದೆ.

ಮದ್ಯಾಹ್ನ 12 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ಸಭಾಧ್ಯಕ್ಷತೆಯನ್ನು ಡಾ|| ಪ್ರಭಾಕರ ಭಟ್ ಕಲ್ಲಡ್ಕ ರವರು ವಹಿಸಲಿದ್ದಾರೆ. ವಿಶೇಷ ಅಭ್ಯಾಗತರಾಗಿ ಶ್ರೀ ಕಿರಣ್ ಚಂದ್ರ ಡಿ ಪುಷ್ಪಗಿರಿ, ಶ್ರೀ ಎಸ್ ಗಿರೀಶ್, ಡಾ|| ಯೋಗೀಶ್, ಶ್ರೀ ಎಸ್ ಬಾಲಕೃಷ್ಣ ಶೆಟ್ಟಿ ಮತ್ತು ಶ್ರೀ ಮಿಥುನ್ ಜಿ ಎಸ್ ರವರು ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ನಂತರ 1.30 ರಿಂದ 6 ಗಂಟೆಯ ತನಕ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

Leave a Reply

Your email address will not be published. Required fields are marked *