ಪುತ್ತೂರು: 1996ರ ಜನವರಿ 12ರಂದು ಮಂಗಳೂರಿನ ಟೌನ್‌ ಹಾಲ್‌ನಲ್ಲಿ ನಡೆದ ರಂಗಪ್ರವೇಶ ಕಾರ್ಯಕ್ರಮದಲ್ಲಿ ತನ್ನ ಪ್ರತಿಭೆ ಮೆರೆದು 30 ವರ್ಷಗಳ ಬಳಿಕ ಮತ್ತೆ ಅದನ್ನೇ ನೆನಪಿಸಿರುವ ಶ್ರೀ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿಯ ನೃತ್ಯ ನಿರ್ದೇಶಕ ವಿದ್ವಾನ್ ಬಿ ದೀಪಕ್ ಕುಮಾ‌ರ್ ಅವರು ಮತ್ತೊಮ್ಮೆ ಅದನ್ನು ಪ್ರಸ್ತುತ ಪಡಿಸುವ ಕಾರ್ಯಕ್ರಮವಾಗಿ ನೃತ್ಯೋತ್ಮಮಣವು ಜ.11ರಂದು ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಸಂಜೆ ಗಂಟೆ 5ರಿಂದ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿಯ ನೃತ್ಯ ಗುರು ವಿದುಷಿ ಪ್ರೀತಿಕಲಾ ಅವರು ಮಾತನಾಡಿ ಬಿ ದೀಪಕ್ ಕುಮಾರ್ ಅವರು ಮಂಗಳೂರು ಟೌನ್‌ ಹಾಲ್‌ನಲ್ಲಿ ನೃತ್ಯ ರಂಗಪ್ರವೇಶ ಮಾಡಿ 30 ವರ್ಷಗಳ ಬಳಿಕ ಮತ್ತೆ ಅದನ್ನೇ ನೆನಪಿಸಿ ಮರುಸೃಷ್ಟಿಸುವ ಮೂಲಕ ಮತ್ತೊಮ್ಮೆ ಕೆಲವು ಆಯ್ದ ನೃತ್ಯಗಳನ್ನು ಮರು ಅರ್ಪಣೆ ಮಾಡಲಿದ್ದಾರೆ.

ಆ ಸಂದರ್ಭ ರಂಗಪ್ರವೇಶಕ್ಕೆ ಹಿನ್ನೆಲೆ ನುಡಿಸಿದವರ ಪೈಕಿ ಮೃದಂಗ ವಾದನ ಮಾಡಿದ ಕರ್ನಾಟಕ ಕಲಾಶ್ರೀ ಜಿ ಗುರುಮೂರ್ತಿ ಬೆಂಗಳೂರು ಅವರು ಮತ್ತೊಮ್ಮೆ ಮೃದಂಗ ನುಡಿಸಲಿದ್ದಾರೆ. ಅದೇ ರೀತಿ ಅಂದು ನೃತ್ಯದ ಅಮೂಲ್ಯ ಕ್ಷಣಗಳನ್ನು ಸೆರಹಿಡಿದ ಯಜ್ಞ ಮಂಗಳೂರು ಅವರು ನೃತ್ಯದ ಕ್ಷಣಗಳನ್ನು ಮತ್ತೊಮ್ಮೆ ಕ್ಯಾಮೆರಾದಲ್ಲಿ ಸೆರೆಹಿಡಿಯಲಿದ್ದಾರೆ.

ನೃತ್ಯ ಗುರುಗಳಾದ ಬೆಂಗಳೂರು ಶ್ರೀ ರಾಜರಾಜೇಶ್ವರಿ ಕಲಾನಿಕೇತನದ ನೃತ್ಯ ಕಲಾವಿದೆ ಡಾ. ವೀಣಾ ಮೂರ್ತಿ ವಿಜಯ್ ಬೆಂಗಳೂರು ಮತ್ತು ಮಂಗಳೂರು ನಾಟ್ಯನಿಕೇತನ ಕೊಲ್ಯ ಇದರ ನೃತ್ಯ ಕಲಾವಿದೆ ಗುರು ವಿದುಷಿ ರಾಜಶ್ರೀ ಉಳ್ಳಾಲ ಹಾಗು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಸದಸ್ಯೆ ದಂತ ವೈದ್ಯೆ ಡಾ. ಆಶಾ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಲೋಕೇಶ್ ಬನ್ನೂರು ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಗುವುದು. ಹಿಮ್ಮೇಳದಲ್ಲಿ ನಟುವಾಂಗ ಮತ್ತು ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ ಅವರು ಸಾತ್ ನೀಡಲಿದ್ದಾರೆ. ಮೃದಂಗಳದಲ್ಲಿ ವಿದ್ವಾನ್‌ ಜಿ ಗುರುಮೂರ್ತಿ ಬೆಂಗಳೂರು, ಮೃದಂಗದಲ್ಲಿ ಕು.ಮೇಧಾ ಉಡುಪ ಮಂಗಳೂರು, ಪಿಟೀಲಿನಲ್ಲಿ ಕು. ತನ್ಮಯಿ ಉಪ್ಪಂಗಳ ಅವರು ಸಹಕರಿಸಲಿದ್ದಾರೆ ಎಂದು ಹೇಳಿದರು.

ವಿದ್ವಾನ್ ದೀಪಕ್ ಕುಮಾರ್ ಅವರು ಮಾತನಾಡಿ ಭರತನಾಟ್ಯ ರಂಗ ಪ್ರವೇಶ ಮಾಡುವ ಸಂದರ್ಭ ನಾನು ಪಿಯುಸಿ ಓದುತ್ತಿದ್ದೆ. 17ನೇ ವಯಸ್ಸಿನಲ್ಲಿ ರಂಗಪ್ರವೇಶ ಮಾಡಿದ್ದೆ. ಇದೀಗ 30 ವರ್ಷಗಳ ಬಳಿಕ ಮತ್ತೆ ಅದನ್ನು ಪ್ರಸ್ತುತಿ ಮಾಡುತ್ತಿದ್ದೇನೆ ಎಂದರು.

Leave a Reply

Your email address will not be published. Required fields are marked *