ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್(ರಿ.) ಪಡುಮಲೆ, ಪಡುವನ್ನೂರು, ಪುತ್ತೂರು ದ.ಕ ಕೋಟಿ ಚೆನ್ನಯ ಜನ್ಮಸ್ಥಾನ ಮತ್ತು ಮೂಲಸ್ಥಾನ ಇಲ್ಲಿ ಜ.24 ರಂದು ಸಂಜೆ ಗಂಟೆ 6-30ಕ್ಕೆ ನಾಗಬೆರ್ಮರಿಗೆ ಮತ್ತು ದೇವಿ ಸ್ವರೂಪಿಣಿ ತಾಯಿ ದೇಯಿ ಬೈದೆದಿಯವರಿಗೆ ವಿಶೇಷ ಪೂಜೆ ಹಾಗೂ ದೀಪೋತ್ಸವವು ನಡೆಯಲಿರುವುದು.
ಅದೇದಿನ ರಾತ್ರಿ 7.30ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಶ್ರೀ ಜೈನ ಮಠ,ಮೂಡುಬಿದಿರೆ ಮತ್ತು ಶ್ರೀ ಶ್ರೀ ಶ್ರೀ ವಿದ್ಯಾವಾಚಸ್ವತಿ ಡಾ| ಸಂತೋಷ್ ಭಾರತೀ ಶ್ರೀಪಾದಂಗಳವರು(ಸAತೋಷ್ ಗುರೂಜಿ) ಇವರಿಂದ ಆಶೀರ್ವಚನ ನಡೆಯಲಿದೆ.




ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶ್ರೀ ಹರಿಕೃಷ್ಣ ಬಂಟ್ವಾಳ ಅಧ್ಯಕ್ಷರು,ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್(ರಿ.), ಮುಖ್ಯ ಅತಿಥಿಗಳಾಗಿ ಶ್ರೀ ಟಿ. ಶ್ಯಾಮ್ ಭಟ್,(IAS RETD)ಅಧ್ಯಕ್ಷರು, ಮಾನವ ಹಕ್ಕು ಆಯೋಗ, ಕರ್ನಾಟಕ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾನ್ಯ ಸಂಸದರು, ಮಂಗಳೂರು, ಶ್ರೀ ಅಶೋಕ್ ಕುಮಾರ್ ರೈ, ಮಾನ್ಯ ಶಾಸಕರು ಪುತ್ತೂರು, ಶ್ರೀ ಕಿಶೋರ್ ಕುಮಾರ್ ಬೊಟ್ಯಾಡಿ,ಮಾನ್ಯ ಶಾಸಕರು,ವಿಧಾನ ಪರಿಷತ್, ಶ್ರೀ ಕೆ.ಹರೀಶ್ ಕುಮಾರ್,(EX MLC ) ಅಧ್ಯಕ್ಷರು ಮೆಸ್ಕಾಂ ಮಂಗಳೂರು, ಶ್ರೀ ಮಂಜುನಾಥ ಪೂಜಾರಿ, ಮುದ್ರಾಡಿ ಅಧ್ಯಕ್ಷರು, ಶ್ರೀ ನಾರಾಯಣ ಗುರು ನಿಗಮ, ಶ್ರೀಮತಿ ಮಲ್ಲೀಕಾ ಪಕ್ಕಳ, ಸದಸ್ಯರು, ರಾಜ್ಯ ಧಾರ್ಮಿಕ ಪರಿಷತ್ ಕರ್ನಾಟಕ, ಶ್ರೀ ಸಂಜೀವ ಮಠಂದೂರು, ಮಾಜಿ ಶಾಸಕರು, ಪುತ್ತೂರು, ಉಪಸ್ಥಿತಿಯಲ್ಲಿರಲಿದ್ದಾರೆ.



ಅಥಿತಿಗಳಾಗಿ ಶ್ರೀಮತಿ ಕೃತೀನ್ ಅಮೀನ್,ಟ್ರಸ್ಟಿ, ಶ್ರೀ ಗೋಕಣ್ನಾಥೇಶ್ವರ ದೇವಸ್ಥಾನ ಕುದ್ರೋಳಿ,ಶ್ರೀಮತಿ ಕವಿತಾ ಸನಿಲ್, ಮಾಜಿ ಮೇಯರ್ ಮಂಗಳೂರು, ಶ್ರೀ ವಿಜಯವಿಕ್ರಮ ಜಿ.ರಾಮಕುಂಜ, ಸಂಚಲಕರು, ಶ್ರೀ ಆದಿನಾಗ ಮುಗೇರ್ಕಳ, ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್,ಶ್ರೀ ಕಿರಣ್ಚಂದ್ರ ಡಿ.ಪುಷ್ಪಗಿರಿ,ಧಾರ್ಮಿಕ ಮುಖಂಡರು,ಬೆಳ್ತಂಗಡಿ,ಶ್ರೀ ಸುಂದರ ಪೂಜಾರಿ,ನಿವೃತ್ತ ಜಂಟಿ ನಿರ್ದೇಶಕರು ಉಪಾಧ್ಯಕ್ಷರು,ಶ್ರೀ ಗುರುನಾರಾಯಣ ಸೇವಾ ಸಂಘ,ಬೆಳ್ತಂಗಡಿ,ಶ್ರೀ ಸುಧಾಕರ ಶೆಟ್ಟಿ,ಉದ್ಯಮಿ ಪಡುಮಲೆ ಉಪಸ್ಥಿತಿಯಲ್ಲಿರಲಿದ್ದಾರೆ.


