ಪುತ್ತೂರು: ಬಂಟರ ಸಂಘ ಪುತ್ತೂರು ತಾಲೂಕು ಇದರ ಸಾರಥ್ಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ಇದರ ಮಾರ್ಗದರ್ಶನದಲ್ಲಿ ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ವಿಭಾಗ ಇದರ ಸಹಕಾರದಲ್ಲಿ ನ.22 ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಮಧ್ಯಾಹ್ನ 2.30 ರಿಂದ ರಾತ್ರಿ 8.30 ರತನಕ ಬಂಟೆರೆ ಸೇರಿಗೆ -2025 ಸಾಧಕರಿಗೆ ಸನ್ಮಾನ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಚಿನ್ನದ ಪದಕ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.
ನ. 20 ರಂದು ಪುತ್ತೂರು ಪ್ರೆಸ್ ಕ್ಲಬ್ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನ.22ರಂದು ಅಪರಾಹ್ನ 2.30ರಿಂದ ಕಾಠ್ಯಕ್ರಮ ಆರಂಭಗೊಳ್ಳಲಿದೆ.
ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈಯವರು ಬಂಟೆರೆ ಸೇರಿಗೆ ಕಾಠ್ಯಕ್ರಮದ ಮಹಾದ್ವಾರವನ್ನು ಉದ್ಘಾಟನೆಗೈಯಲಿದ್ದಾರೆ.



ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ ಧ್ವಜಾರೋಹಣ ಮಾಡಲಿದ್ದಾರೆ. ಮಂಗಳೂರು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕ ಅರಿಯಡ್ಕ ಚಿಕ್ಕಪ್ಪ ನ್ಯಾಕ್, ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ಎನ್. ಜಗನ್ನಾಥ ರೈ ಮಾದೋಡಿ, ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ ಜ್ಯೋತಿ ಪ್ರಜ್ವಲನೆ ಮಾಡಲಿದ್ದಾರೆ. ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು ಸಾಂಸ್ಕೃತಿಕ ಕಾಠ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಚಾವಡಿ ಮಾತು ನಡೆಸಿಕೊಡಲಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ ಗೌರವ ಉಪಸ್ಥಿತಿ ಇರುತ್ತಾರೆ. ತಾಲೂಕು ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ, ತಾಲೂಕು ಯುವ ಬಂಟರ ವಿಭಾಗದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು ಹಾಗೂ ತಾಲೂಕು ವಿದ್ಯಾರ್ಥಿ ಬಂಟರ ವಿಭಾಗದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳತ್ತಡ್ಡರವರುಗಳು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.


ಸಂಜೆ 4.30 ರಿಂದ ಬಂಟೆರೆ ಮೆರವಣಿಗೆ ದರ್ಬೆ ರೈ ಪೆಟ್ರೋಲ್ ಪಂಪ್ ಬಳಿ ಆರಂಭಗೊಂಡು, ಕೊಂಬೆಟ್ಟು ಬಂಟರ ಭವನದ ತನಕ ಅದ್ದೂರಿಯಾಗಿ ನಡೆಯಲಿದೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಚಿನ್ನದ ಪದಕ ಪ್ರಶಸ್ತಿ ಪುರಸ್ಕೃತರನ್ನು ವಾಹನದ ಮೂಲಕ ಮೆರವಣಿಗೆಯಲ್ಲಿ ಕರೆತರಲಾಗುವುದು, ಸಾಧನೆಗೈದ ಸಮಾಜ ಬಾಂಧವರನ್ನು ಪ್ರಪ್ರಥಮ ಬಾರಿಗೆ ಮೆರವಣಿಗೆಯ ಮೂಲಕ ಕರೆತರುವ ಕಾರ್ ನಡೆಯಲಿದೆ ಎಂದು ಹೇಮನಾಥ ಶೆಟ್ಟಿ ತಿಳಿಸಿದರು.
ಸಂಜೆ 3.30 ರಿಂದ ಯಕ್ಷಮಾಣಿಕ್ಯ ಚಿಂತನಾ ಹೆಗ್ಡೆ ಮಾಲಕೋಡ್ ಮತ್ತು ಬಳಗದಿಂದ ದೊಡ್ಡ ಮಟ್ಟದಲ್ಲಿ ಯಕ್ಷ ನಾಟ್ಯ ವೈಭವ ನಡೆಯಲಿದೆ.
ಸಂಜೆ 6ಕ್ಕೆ ಶಾಸಕ ಅಶೋಕ್ ಕುಮಾರ್ ರೈ ಸಭಾ ಕಾಠ್ಯಕ್ರಮದ ಉದ್ಘಾಟನೆಗೈಯಲಿದ್ದಾರೆ. ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಸಾಧಕರಿಗೆ ಸನ್ಮಾನ ನೇರವೇರಿಸಲಿದ್ದಾರೆ. ಮುಂಬಯಿ ಹೇರಂಭಾ ಗ್ರೂಪ್ ಕಂಪೆನಿಯ ಸಂಸ್ಥಾಪಕ ಡಾ.ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಪ್ರಶಸ್ತಿ ಪ್ರಧಾನವನ್ನು ನಡೆಸಿಕೊಡಲಿದ್ದಾರೆ. ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ್ ರೈ ಮತ್ತು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಉದ್ಯಮಿ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡುತ್ತಿರುವವರು ಹೇರಂಭಾ ಗ್ರೂಪ್ ಕಂಪೆನಿಯ ಸಂಸ್ಥಾಪಕ ಡಾ.ಕೂಳೂರು ಕನ್ಯಾನ ಸದಾಶಿವ ಶೆಟ್ಟಿರವರು, ಅವರು ಕಷ್ಟದಲ್ಲಿ ಜೀವನ ನಡೆಸಿದವರು, ಬಂಟ್ಸ್ ಹಾಸ್ಟೆಲ್‌ನ ಇದ್ದುಕೊಂಡು ಸ್ಕಾಲರ್‌ಶಿಫ್ ಮೂಲಕ ಶಿಕ್ಷಣ ಕಲಿತು, ಸತತ ಸಾಧನೆಯನ್ನು ಮಾಡಿ, ಇಂದು ಸಾವಿರಾರು ಕೋಟಿ ರೂಪಾಯಿಯನ್ನು ದಾನ ಮಾಡುತ್ತಿರುವ ಕನ್ಯಾನ ಸದಾಶಿವ ಶೆಟ್ಟಿಯವರಿಗೆ ಸುವರ್ಣ ಕರ್ನಾಟಕ ಪ್ರಶಸ್ತಿ ಹಾಗೂ ಡಾಕ್ಟರೇಟ್ ಪದವಿಯನ್ನು ಪಡೆದಿರುವ ಹಿನ್ನಲೆಯಲ್ಲಿ ಪುತ್ತೂರು ತಾಲೂಕು ಬಂಟರ ಸಂಘದಿಂದ ಉದ್ಯಮ ಕ್ಷೇತ್ರದ ಸಾಧಕರ ನೆಲೆಯಲ್ಲಿ ಸನ್ಮಾನ ಕಾಠ್ಯಕ್ರಮ ನಡೆಯಲಿದೆ ಎಂದು ಹೇಮನಾಥ ಶೆಟ್ಟಿ ತಿಳಿಸಿದರು.
ಬನ್ನೂರುಗುತ್ತು ತಾರಾ ಅಂತಪ್ಪ ಶೆಟ್ಟಿ ಕಾವು ಬಂಟ ಶಿರೋಮಣಿ ಪ್ರಶಸ್ತಿಯನ್ನು ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈಯವರಿಗೆ (ಪ್ರಾಯೋಜಕರು- ಕಾವು ಹೇಮನಾಥ ಶೆಟ್ಟಿ) ಮಿತ್ರಂಪಾಡಿ ಚೆನ್ನಪ್ಪ ರೈ ಸ್ಮರಣಾರ್ಥ ಸಮಾಜ ಸೇವಾ ಮಿತ್ರ ಪ್ರಶಸ್ತಿಯನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್‌ರವರಿಗೆ( ಪ್ರಾಯೋಜಕರು- ಜಯರಾಮ್ ರೈ ಮಿತ್ರಂಪಾಡಿ ಅಬುದಾಬಿ) ಬೂಡಿಯಾರ್ ವೈದ್ಯಕೀಯ ಪ್ರತಿಷ್ಠಿತ ಪ್ರಶಸ್ತಿಯನ್ನು ಡಾ. ಶ್ಯಾಮ್ ಪ್ರಸಾದ್ ಶೆಟ್ಟಿ ಬೆಳ್ಳಿಪ್ಪಾಡಿಯವರಿಗೆ ( ಪ್ರಾಯೋಜಕರು- ಡಾ,ಬೂಡಿಯಾರ್ ಸಂಜೀವ ರೈ) ಸಾಧಕ ಸಹಕಾರಿ ರಶ್ಮಿ ಪ್ರಶಸ್ತಿಯನ್ನು ಶಶಿಕುಮಾರ್ ರೈ ಬಾಲ್ಗೊಟ್ಟುರವರಿಗೆ( ಪ್ರಾಯೋಜಕರು-ಸವಣೂರು ಕೆ.ಸೀತಾರಾಮ ರೈ) ಪುತ್ತೂರು ಬಂಟಸಿರಿ ಪ್ರಶಸ್ತಿಯನ್ನು ಆಪ್ತ ಸಮಾಲೋಚಕಿ ರಾಣಿ ಶೆಟ್ಟಿಯವರಿಗೆ( ಪ್ರಾಯೋಜಕರು- ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ) ಉತ್ತಮ ಶಿಕ್ಷಕ ಅಶ್ವಿನಿ ಪ್ರಶಸ್ತಿಯನ್ನು ವಿಠಲ ರೈ ಕೊಣಾಲುಗುತ್ತುರವರಿಗೆ( ಪ್ರಾಯೋಜಕರು- ದೇರ್ಲ ಕರುಣಾಕರ್ ರೈ) ಪಂಚಮಿ ಉದ್ಯಮಿ ಸಿರಿ ಪ್ರಶಸ್ತಿಯನ್ನು ಎನ್. ಶಿವಪ್ರಸಾದ್ ಶೆಟ್ಟಿ ಕಿನಾರರವರಿಗೆ ( ಪ್ರಾಯೋಜಕರು- ಮಿತ್ರಂಪಾಡಿ ಪುರಂದರ ರೈ) ಸಿರಿ ಕಡಮಜಲು ಕೃಷಿ ಪ್ರಶಸ್ತಿಯನ್ನು ಸುಧಾಕರ್ ರೈ ಪರಾರಿಗುತ್ತುರವರಿಗೆ( ಪ್ರಾಯೋಜಕರು- ಕಡಮಜಲು ಸುಭಾಸ್ ರೈ) ದಿ.ರೇಖಾ ಮುತ್ತಪ್ಪ ರೈ ಮತ್ತು ದಿ.ಜಯಂತ್ ರೈ ಸ್ಮರಣಾರ್ಥ ಕ್ರೀಡಾ ಪ್ರಶಸ್ತಿಯನ್ನು ಸದಾಶಿವ ಶೆಟ್ಟಿಅಜಿಲಾಡಿಬೀಡುರವರಿಗೆ( ಪ್ರಾಯೋಜಕರು-ಎನ್.ಚಂದ್ರಹಾಸ್ ಶೆಟ್ಟಿ) ಅರಣ್ಯಾಧಿಕಾರಿ ದಿ. ಮಂಜುನಾಥ ಶೆಟ್ಟಿ ಪನಡ ಸ್ಮರಣಾರ್ಥ ಅರಣ್ಯ ಮಿತ್ರ ಪ್ರಶಸ್ತಿಯನ್ನು ಪಿ.ಡಿ.ಕೃಷ್ಣಕುಮಾರ್ ರೈ ಪುಪ್ಪಾಡಿ ದೇವಸ್ಯರವರಿಗೆ( ಪ್ರಾಯೋಜಕರು- ವಿಜಯಾ ಮಂಜುನಾಥ ಶೆಟ್ಟಿ) ದೇಶ ಸೇವಾ ಅಗರಿ ಪ್ರಶಸ್ತಿಯನ್ನು ಜಗನ್ನಾಥ ರೈ ಎಂರವರಿಗೆ( ಪ್ರಾಯೋಜಕರು- ಅಗರಿ ಭಂಡಾರಿ ಸಹೋದರರು) ಪಿಯುಸಿ ವಿಭಾಗದ ಪ್ರತಿಭಾನ್ವಿತ ವಿದ್ಯಾ ಅರಿಯಡ್ಕ ಪ್ರಶಸ್ತಿಯನ್ನು ವರ್ಷಿಣಿ ಆಳ್ವರವರಿಗೆ( ಪ್ರಾಯೋಜಕರು- ಅರಿಯಡ್ಕ ಚಿಕ್ಕಪ್ಪ ನಾಕ್) ಎಸ್‌ಎಸ್‌ಎಲ್‌ಸಿ ವಿಭಾಗದ ಪ್ರತಿಭಾನ್ವಿತ ವಿದ್ಯಾ ಚನಿಲ ಪ್ರಶಸ್ತಿಯನ್ನು ಅನ್ವಿತಾ ರೈಯವರಿಗೆ( ಪ್ರಾಯೋಜಕರು- ಚನಿಲ ತಿಮ್ಮಪ್ಪ ಶೆಟ್ಟಿ) ನೀಡಲಾಗುವುದು ಸಭಾ ಕಾಠ್ಯಕ್ರಮದ ಬಳಿಕ ಶುಚಿ-ರುಚಿಯಾದ ಸಸ್ಯಹಾರಿ ಮತ್ತು ಮಂಸಾಹಾರಿ ಭೋಜನದ ವ್ಯವಸ್ಥೆಯನ್ನು ಮಾಡಲಾಗುವುದು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದರು.
ನ.22ರಂದು ಬೆಳಿಗ್ಗೆ 10.30ಕ್ಕೆ ತಾಲೂಕು ಬಂಟರ ಸಂಘದ ಮಹಾಸಭೆಯು ನಡೆಯಲಿದ್ದು, ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ವಿನಂತಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಸಹಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ತಾಲೂಕು ಬಂಟರ ಸಂಘದ ಪ್ರಧಾನ ಕಾಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ಹಾಗೂ ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಸಾಜ ಉಪಸ್ಥಿತರಿದ್ದರು.

