ಕಡಬದಲ್ಲಿನ ಜೆ ಎಂ ಜೆ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆರ್ಥೋಪೆಡಿಕ್ (Ortho) ಶಸ್ತ್ರ ಚಿಕಿತ್ಸೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದೆ. ಈ ಶಸ್ತ್ರ ಚಿಕಿತ್ಸೆಯನ್ನು ಪ್ರಸಿದ್ಧ ಆರ್ಥೋ ಸರ್ಜನ್ ಡಾ. ಶ್ರೇಯಸ್ (ಎಂ.ಬಿ.ಬಿ.ಎಸ್., ಎಂ.ಎಸ್.–Ortho) ಅವರು ನೆರವೇರಿಸಿದ್ದು, ಶಸ್ತ್ರ ಚಿಕಿತ್ಸೆಯ ವೇಳೆ ಆಸ್ಪತ್ರೆಯ ಅನುಭವಿ ವೈದ್ಯಕೀಯ ಸಿಬ್ಬಂದಿ ಹಾಗೂ ನರ್ಸಿಂಗ್ ತಂಡ ಸಂಪೂರ್ಣ ಸಹಕಾರ ನೀಡಿದೆ.
ಶಸ್ತ್ರ ಚಿಕಿತ್ಸೆಯ ನಂತರ ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆಸ್ಪತ್ರೆಯ ಸಮಯಪಾಲನೆ, ತಾಂತ್ರಿಕ ನೈಪುಣ್ಯ ಹಾಗೂ ತಂಡದ ಸಮನ್ವಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಗ್ರಾಮೀಣ ಪ್ರದೇಶದಲ್ಲಿಯೇ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತಿರುವ ಜೆ ಎಂ ಜೆ ಆಸ್ಪತ್ರೆ ಕಡಬ, ಆರ್ಥೋ ಚಿಕಿತ್ಸೆಯಲ್ಲಿ ಮತ್ತೊಮ್ಮೆ ತನ್ನ ನಂಬಿಕೆಯನ್ನು ಸಾಬೀತುಪಡಿಸಿದೆ.









