ಕೋಲಾರ : ನೀರು ಎಂದು ಭಾವಿಸಿ ಪೇಂಟ್ ಗೆ ಬಳಸುವ ಥಿನ್ನರ್ ಕುಡಿದು 3 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯಲ್ಲಿ ನಡೆದಿದೆ.

ಮೃತ ಬಾಲಕಿಯನ್ನ ಜಾನ್ವಿ ಅಲಿಯಾಸ್ ಜಾನು (3) ಎಂದು ಗುರುತಿಸಲಾಗಿದೆ. ಕುಡಿಯುವ ನೀರು ಎಂದು ಬಾವಿಸಿ ಬಾಲಕಿ ಥಿನ್ನರ್ ಕುಡಿದಿದ್ದಳು.

ಅಸ್ವಸ್ಥಗೊಂಡಿದ್ದ ಬಾಲಕಿಯನ್ನ ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಜಾನ್ವಿ ಅಲಿಯಾಸ್ ಜಾನು ಇಂದು ಮೃತಪಟ್ಟಿದ್ದಾಳೆ. ಮುಳಬಾಗಿಲು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮನೆಯಲ್ಲಿ ಚಿಕ್ಕಮಕ್ಕಳಿರುವ ಪೋಷಕರು ಎಚ್ಚರದಿಂದಿರಬೇಕು. ಇಲ್ಲವಾದಲ್ಲಿ ಇಂತಹ ಅವಘಡಗಳು ಸಂಭವಿಸುತ್ತದೆ.

Leave a Reply

Your email address will not be published. Required fields are marked *