ಮಣಿಪಾಲ : ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೃಹತ್ ‌ ಗೀತೋತ್ಸವದ ನಿಮಿತ್ತ ನ . 28 ರಂದು ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬರಲಿದ್ದು , ಆ ಸಂಬಂಧ ಜಿಲ್ಲಾಡಳಿತ , ಪೊಲೀಸ್ ‌ ಇಲಾಖೆಯಿಂದ ನಡೆಯುತ್ತಿರುವ ಸಿದ್ಧತೆಗಳ ಬಗ್ಗೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳ ಸಭೆ ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು .

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ , ಪ್ರಧಾನಿಯವರು ಆಗಮಿಸುವ ಸಂದರ್ಭದಲ್ಲಿ ಸ್ಥಳೀಯವಾಗಿ ವಾಹನ ನಿಲುಗಡೆ , ಸಂಚಾರ ವ್ಯವಸ್ಥೆ ಇತ್ಯಾದಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು . ಕಾರ್ಯಕ್ರಮಕ್ಕೆ ಬರುವ ಭಕ್ತರಿಗೂ ಯಾವುದೇ ಸಮಸ್ಯೆ ಆಗದಂತೆಯೂ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಇತ್ಯಾದಿ ಸಲಹೆಗಳನ್ನು ನೀಡಿದರು .

ಶಾಸಕರಾದ ವಿ . ಸುನಿಲ್ ‌ ಕುಮಾರ್ ‌, ಯಶ್ ‌ ಪಾಲ್ ‌ ಎ . ಸುವರ್ಣ , ಗುರ್ಮೆ ಸುರೇಶ್ ‌ ಶೆಟ್ಟಿ , ಕಿರಣ್ ‌ ಕುಮಾರ್ ‌ ಕೊಡ್ಗಿ , ಗುರುರಾಜ್ ‌ ಗಂಟಿಹೊಳೆ ಮೊದಲಾದವರು ಭದ್ರತೆ , ಸುರಕ್ಷೆ ಹಾಗೂ ಕಾರ್ಯಕ್ರಮ ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಹಲವು ಸಲಹೆ ಸೂಚನೆ ನೀಡಿದರು .

ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಲಕ್ಷ ಕಂಠ ಗೀತಾ ಪಾರಾಯಣ – ಬೃಹತ್ ‌ ಗೀತೋತ್ಸವ ನಡೆಯಲಿದ್ದು , ಪ್ರಧಾನಿ ಜತೆಗೆ ವೇದಿಕೆಯಲ್ಲಿ ಯಾರೆಲ್ಲ ಉಪಸ್ಥಿತರಿರಬೇಕು ಎಂಬುದನ್ನು ಗೊಂದಲ ಇಲ್ಲದೇ ಸ್ಪಷ್ಟಪಡಿಸಿಕೊಳ್ಳಬೇಕು ಎಂದರು .

ಜಿಲ್ಲಾಧಿಕಾರಿ ಸ್ವರೂಪಾ ಟಿ . ಕೆ ., ಪೊಲೀಸ್ ‌ ವರಿಷ್ಠಾಧಿಕಾರಿ ಹರಿರಾಮ್ ‌ ಶಂಕರ್ ‌, ಅಪರ ಜಿಲ್ಲಾಧಿಕಾರಿ ಅಬೀದ್ ‌ ಗದ್ಯಾಳ್ ‌, ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಶೆಟ್ಟಿ ಕುತ್ಯಾರು , ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮೊದಲಾದವರಿದ್ದರು .

Leave a Reply

Your email address will not be published. Required fields are marked *