ಕಡಬ: ಸಂಕಷ್ಟದಲ್ಲಿರುವವರಿಗೆ ನೆರವಾಗಲು ಹಣಕ್ಕಿಂತ ಮನಸ್ಸೇ ಮುಖ್ಯ ಎಂಬುದನ್ನು ಪೋಸ್ಟ್ ಮ್ಯಾನ್ ಶಶಿಕಾಂತ್ ಅವರು ತೋರಿಸಿದ್ದಾರೆ. ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಾಲಕಿ ಜ್ಯೋತಿಯ ನೆರವಿಗೆ ಧಾವಿಸಿ, ಆಸ್ಪತ್ರೆಗೆ ತೆರಳಿ ಆಕೆಯ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿ ಕೊಡುವ ಮೂಲಕ ಅವರು ಮಾನವೀಯತೆ ಮೆರೆದಿದ್ದಾರೆ.





ಕಡಬ ತಾಲೂಕಿನ ಚಾರ್ವಕ ಗ್ರಾಮದ ಬಾಂತೋಡು ಮನೆಯ 13 ವರ್ಷದ ಜ್ಯೋತಿ ಗಂಭೀರ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಪ್ರಸ್ತುತ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬಡ ಕುಟುಂಬಕ್ಕೆ ಸೇರಿದ ಈ ಬಾಲಕಿಯ ಚಿಕಿತ್ಸೆಗೆ ಸುಮಾರು 6 ಲಕ್ಷ ರೂಪಾಯಿಗಳ ಅಗತ್ಯವಿದ್ದು, ದಾಖಲೆಗಳ ಕೊರತೆಯಿಂದ ಸರ್ಕಾರಿ ಸೌಲಭ್ಯ ಪಡೆಯಲು ತೊಂದರೆ ಉಂಟಾಗಿತ್ತು.
ಈ ವಿಷಯ ತಿಳಿದುಕೊಂಡ ಪೋಸ್ಟ್ ಮ್ಯಾನ್ ಶಶಿಕಾಂತ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಗತ್ಯ ದಾಖಲೆ ತಿದ್ದುಪಡಿ ಕಾರ್ಯವನ್ನು ಸ್ಥಳದಲ್ಲೇ ಪೂರ್ಣಗೊಳಿಸಿದ್ದಾರೆ. ಅವರ ಈ ಸೇವಾ ಮನೋಭಾವಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಚಿಕಿತ್ಸೆಗೆ ಹಣದ ಕೊರತೆಯಿಂದ ಸಂಕಷ್ಟದಲ್ಲಿರುವ ಪುಷ್ಪಲತಾ ಮತ್ತು ಮೋಹನ್ ದಂಪತಿಗಳ ಪುತ್ರಿ ಜ್ಯೋತಿಗೆ ನೆರವಾಗಲು ದಾನಿಗಳು ಮುಂದೆ ಬರಬೇಕಾಗಿದೆ.



ಸಹಾಯಕ್ಕಾಗಿ ವಿವರಗಳು:
ಖಾತೆದಾರರ ಹೆಸರು: ಲಲಿತಾ ಎಂ
ಬ್ಯಾಂಕ್: ಕೆನರಾ ಬ್ಯಾಂಕ್
ಖಾತೆ ಸಂಖ್ಯೆ: 02122200059744
IFSC: CNRB0010212
ಫೋನ್‌ಪೇ/ಮೊಬೈಲ್: 8971832354
ಮಾನವೀಯತೆಗೆ ಮಾದರಿಯಾದ ಈ ಘಟನೆ ಸಮಾಜಕ್ಕೆ ಪ್ರೇರಣೆಯಾಗಿದೆ.

