ಪುತ್ತೂರು: ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ (KUWJ ಘಟಕ)ದ ಪದಗ್ರಹಣ ಸಮಾರಂಭವು ಜನವರಿ 24, 2026ರ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಪುತ್ತೂರು ನಗರದಲ್ಲಿರುವ ಕಾಮಟೆ ರಾಜೀವ್ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ನಡೆಯಲಿದೆ.





ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಅಬೂಬಕರ್ ಕುಮಾರ್ ರೈ, ಶಾಸಕರು, ಪುತ್ತೂರು ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಸುಬ್ರಹ್ಮಣ್ಯ ಬಿ. ಎಸ್., ಅಧ್ಯಕ್ಷರು, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವಹಿಸಲಿದ್ದಾರೆ.


ಮುಖ್ಯ ಅತಿಥಿಗಳಾಗಿ ಶ್ರೀಮಾನ್ ನಾಯಕ್ ಇಂದಾಜೆ, ರಾಜ್ಯ ಸಮಿತಿ ಸದಸ್ಯರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಶ್ರೀ ಅಬ್ದುಲ್ ಕುಮಾರ್ ಎನ್. ಭುವರ್ದಿ, ಹಿರಿಯ ಪತ್ರಕರ್ತ, ಹಾಗೂ ಸೈಯದ್ ಅಬ್ದುಲ್ ಹಮೀದ್, ಹಿರಿಯ ಪತ್ರಕರ್ತ ಉಪಸ್ಥಿತರಿರುವರು.
ವಿಶೇಷ ಉಪನ್ಯಾಸವನ್ನು ಶ್ರೀ ಸಿದ್ದಿಕ್ ನೀರೋಡಿ, ಕಾರ್ಯದರ್ಶಿ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡಲಿದ್ದು, ಸ್ವಾಗತವನ್ನು ಸಬೀರ್ ಅಲಿಯಾರ್ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಲಿದ್ದು, ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಪತ್ರಕರ್ತರ ವೃತ್ತಿಪರ ಒಗ್ಗಟ್ಟು, ಸಂಘಟನಾ ಬಲ ಹಾಗೂ ಸಮಾಜದೊಂದಿಗೆ ಪತ್ರಕರ್ತರ ಪಾತ್ರವನ್ನು ಬಲಪಡಿಸುವ ಉದ್ದೇಶದಿಂದ ಈ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

