ಪುತ್ತೂರು: ಹುಬ್ಬಳಿಯ ವಿದ್ಯಾನಗರದಲ್ಲಿರುವ KLE ತಾಂತ್ರಿಕ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಡ್ವನ್ಸ್ ಡ್ ಸೈನ್ಸ್ ನಲ್ಲಿ ಡಿಸೆಂಬರ್ 22ರಿಂದ 24ರವರೆಗೆ ನಡೆದ ಭಾರತೀಯ ರಸಾಯನಶಾಸ್ತ್ರಜ್ಞರ ಮಂಡಳಿಯ 44ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನದಲ್ಲಿ ( Indian Councit Of Chemist) ಭೌತಿಕ ರಸಾಯನಶಾಸ್ತ್ರ ವಿಭಾಗದಲ್ಲಿ ಡಾ. ಪುಷ್ಪ ರೇಖಾರವರಿಗೆ ತಮ್ಮ ಪ್ರಬಂಧದ ಅತ್ಯುತ್ತಮ ಮೌಖಿಕ ಪ್ರಸ್ತುತಿಗಾಗಿ ಪ್ರೊ.ಎಸ್.ಟಿ ನಂದಿ ವೆವೋರ್ ಪ್ರಶಸ್ತಿ-2025 ಪಡೆದುಕೊಂಡಿದ್ದಾರೆ.

ಇವರು ಬಲ್ನಾಡು ಕೊರಗಪ್ಪ ಕುಲಾಲ್ ಮತ್ತು ಇಂದಿರಾ ದಂಪತಿಗಳ ಪುತ್ರಿ. ಪ್ರಸ್ತುತ ಪತಿ ಕೊಲ್ಯದ ಹೇಮಂತ್ ಕುಮಾರ್ ರವರ ಜೊತೆ ವಾಸವಾಗಿದ್ದಾರೆ. ಪ್ರಸ್ತುತ HkBK College Of Engineering Assistant Professor ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಮಂಗಳೂರು ವಿಶ್ವವಿದ್ಯಾನಿಲಯದ ಕೈಗಾರಿಕೆ ರಸಾಯನ ಶಾಸ್ತ್ರ ವಿಭಾಗದ ವಿಶ್ರಾಂತ ಪ್ರೊ. ಬಿ.ಕೆ ಸರೋಜಿನಿ ಅವರ ಮಾರ್ಗದರ್ಶನದಲ್ಲಿ ಪಿ.ಹೆಚ್.ಡಿ ಪದವಿ ಪಡೆದಿರುತ್ತಾರೆ.

Leave a Reply

Your email address will not be published. Required fields are marked *