ಪುತ್ತೂರು : ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣ–ತಂಗಿಯ ನಡುವೆ ಉಂಟಾದ ತಕರಾರು ಹಲ್ಲೆಗೆ ತಿರುಗಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರು ನಿವಾಸಿ ಮುಮ್ತಾಜ್ (32) ನೀಡಿದ ದೂರಿನ ಪ್ರಕಾರ, ಅವರ ತಂಗಿಗೆ ಸೇರಿದ ಜಮೀನನ್ನು ವಿಚಾರದ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.





ಘಟನೆಯು ಮಾರ್ಚ್ 15ರಂದು ಬೆಳಿಗ್ಗೆ ನಡೆದಿದ್ದು, ಮುಮ್ತಾಜ್ ಮನೆಯಲ್ಲಿದ್ದಾಗ ಅಣ್ಣ ಕಲಂದರ್ ಶಾಜಿ ಕತ್ತಿಯೊಂದಿಗೆ ಮನೆಗೆ ಬಂದು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮುಮ್ತಾಜ್ ಅವರು ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.




