ಸುಬ್ರಹ್ಮಣ್ಯ: ಕೆ. ಎಸ್. ಎಸ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಪದವಿ ಪರೀಕ್ಷೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ರಾಂಕ್ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಬಿ.ಎ. ಯಲ್ಲಿ ಒಂಬತ್ತನೇ ರಾಂಕ್ ಪಡೆದಿರುವ ವಿನುತಾ ಅವರು ವಿನಯಕುಮಾರ್ ಅವರ ಪುತ್ರಿಯಾಗಿದ್ದಾರೆ.




ಸುಬ್ರಹ್ಮಣ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಎಸ್ಎಸ್.ಪಿ.ಯು ಕಾಲೇಜಿನಲ್ಲಿ ಪ್ರೌಢಶಾಲಾ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಪಡೆದಿದ್ದಾರೆ. ಪ್ರಸ್ತುತ ಮಂಗಳೂರಿನ ಐಡಿಯಲ್ ಐಸ್ಕ್ರೀಂಮ್ ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದು, ಇವರು ಪೈಲಾಜೆಯ ಬೆಳ್ಳಪ್ಪ ಆಚಾರ್ಯ ಮತ್ತು ಶ್ರೀಮತಿ ಸರಸ್ವತಿ ದಂಪತಿಗಳ ಪುತ್ರಿ.


ಮಯೂರಿ ಎಂ.ಜೆ ಅವರು ಬಿ.ಕಾಂ ನಲ್ಲಿ 9ನೇ ರ್ಯಾಂಕ್ ಪಡೆದಿದ್ದಾರೆ. ಕಡಬ ತಾಲೂಕಿನ ರಾಮಕುಂಜ ಗ್ರಾಮದ ರಾಮಕುಂಜ ಬೃಂದಾವನ ಮನೆಯ ಇವರು ರಾಮಕುಂಜೇಶ್ವರ ವಿದ್ಯಾಸಂಸ್ಥೆಯಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿದ್ದಾರೆ. ಮಯೂರಿ ಎಂ.ಜೆ ಅವರು ಡಿ.ಎಂ.ಜೆ. ಗುಬ್ಬಿ ಮತ್ತು ಶ್ರೀಮತಿ ಕುಸುಮ ದಂಪತಿಗಳ ಪುತ್ರಿ. ಬಿ.ಕಾಂ ಮುಗಿಸಿರುವ ಇವರು ಪ್ರಸ್ತುತ ದೂರ ಶಿಕ್ಷಣದ ಮೂಲಕ ಮುಂಬೈನ ಮುಕಾಂತರ ಎಂ.ಕಾಂ ಮಾಡುತ್ತಿದ್ದು ಸಿ.ಎ ಪರೀಕ್ಷೆಗೂ ತಯಾರಿ ನಡೆಸುತ್ತಿದ್ದಾರೆ.

