ಕಡಬ:
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ, ಮಲ್ಲೇಶ್ವರಂ ಬೆಂಗಳೂರು ಇವರಿಂದ ನಡೆಸಲಾದ ಡ್ರಾಯಿಂಗ್ ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಸರಸ್ವತೀ ವಿದ್ಯಾಲಯ ಪ್ರೌಢಶಾಲೆ, ಹನುಮಾನ್ ನಗರ, ಕೇವಳ–ಕಡಬ ವಿದ್ಯಾ ಸಂಸ್ಥೆ ಶೇ.100% ಫಲಿತಾಂಶ ಸಾಧಿಸಿದೆ.
ಶಾಲೆಯ 05 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ ಒಬ್ಬ ವಿದ್ಯಾರ್ಥಿ ಉನ್ನತ ಶ್ರೇಣಿಯಲ್ಲಿ ಹಾಗೂ ನಾಲ್ವರು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡು ಶಾಲೆಗೆ ಹೆಮ್ಮೆ ತಂದಿದ್ದಾರೆ.





ಪರೀಕ್ಷೆಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳ ವಿವರ ಹೀಗಿದೆ:
ಹರಿಪ್ರಿಯಾ ಹರಿದಾಸ್ – 480 ಅಂಕ
ಮನೀಷಾ ಪಿ.ಆರ್ – 409 ಅಂಕ
ಮೋಕ್ಷಿತಾ – 403 ಅಂಕ
ಕೀರ್ತನ್ ಕೆ – 393 ಅಂಕ
ಚೈತನ್ಯ ಎ – 382 ಅಂಕ
ಈ ಸಾಧನೆಯ ಹಿಂದೆ ಚಿತ್ರಕಲಾ ಶಿಕ್ಷಕರಾದ ಸುಬ್ರಹ್ಮಣ್ಯ ಏನೆಕಲ್ ಹಾಗೂ ಕುಮಾರಿ ಕಾವ್ಯಶ್ರೀ ಡಿ. ಅವರ ಸಮರ್ಪಿತ ತರಬೇತಿ ಮತ್ತು ಮಾರ್ಗದರ್ಶನ ಪ್ರಮುಖವಾಗಿದೆ.


ಶಾಲಾ ಆಡಳಿತ ಮಂಡಳಿ, ಮುಖ್ಯಶಿಕ್ಷಕರು, ಶಿಕ್ಷಕ ವೃಂದ ಹಾಗೂ ಪೋಷಕರು ವಿದ್ಯಾರ್ಥಿಗಳ ಈ ಸಾಧನೆಯನ್ನು ಅಭಿನಂದಿಸಿ, ಮುಂದಿನ ವಿದ್ಯಾಭ್ಯಾಸಕ್ಕೂ ಶುಭ ಹಾರೈಸಿದ್ದಾರೆ.


