ಮಂಗಳೂರು; ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭ ಮಹಿಳೆಯ ಸೀರೆ ಬೈಕ್ ಟಯರ್ ಗೆ ಸಿಲುಕಿ ರಸ್ತೆಗೆ ಎಸೆಯಲ್ಪಟ್ಟ ಘಟನೆ ಸುರತ್ಕಲ್ ಸಮೀಪದ ಕಾಣ ಎಂಬಲ್ಲಿ ನಡೆದಿದೆ.
ತನ್ನ ಮಗನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಘಟನೆ ನಡೆದಿದ್ದು, ಬೈಕ್ ಟಯರ್ ಗೆ ಸೀರೆ ಸಿಲುಕಿ ಮಹಿಳೆ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.. ತಕ್ಷಣವೇ ಹಿಂಬದಿಯಿAದ ಬರುತ್ತಿದ್ದ ಬಸ್ ವೊಂದರ ಚಾಲಕ ಮೊಯ್ದಿ ಎಂಬವರು ತನ್ನ ಬಸ್ ನಿಲ್ಲಿಸಿ ರಸ್ತೆಗೆ ಬಿದ್ದಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕೊಂಡೊಯ್ಯುವಲ್ಲಿ ಸಹಕರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸದ್ಯ ಚಾಲಕ ಮೊಯ್ದಿ ಅವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.







