ಪುತ್ತೂರು: ಪುತ್ತೂರಿನ ಮರೀಲು ಸ್ನೇಹನಗರ ಇಲ್ಲಿನ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಆಶ್ರಯದಲ್ಲಿ 24ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ಅರ್ಚಕರಾದ ವೆಂಕಟೇಶ್ ಭಟ್ ರವರ ನೇತೃತ್ವದಲ್ಲಿ ಸಂಜೆ ಮರೀಲು ಸ್ನೇಹನಗರದ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆಯಲ್ಲಿ ಜರಗಿತು.
ಸ್ನೇಹನಗರದ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆಯ ಗೌರವ ಸಲಹೆಗಾರರಾದ ಭಾಸ್ಕರ ಎಂ.ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.



ಬಳಿಕ ಕೆಮ್ಮಿಂಜೆ ಶ್ರೀರಾಮ ಮಹಿಳಾ ಭಜನಾ ಮಂಡಳಿಯಿಂದ ಭಜನೆ, ಬಳಿಕ ಮಹಾಪೂಜೆ, ಅನ್ನಸಂತರ್ಪಣೆ, ಸಾತ್ವಿಕ್ ಪ್ರಭುರವರಿಂದ ಕೊಳಲು ವಾದನ ನಡೆಯಿತು.

ಈ ಸಂದರ್ಭದಲ್ಲಿ ಉದ್ಯಮಿ ಅಜಿತ್ ರೈ ಹೊಸಮನೆ, ಪದ್ಮ ಸೋಲಾರ್ ಸಿಸ್ಟಂನ ಸೀತಾರಾಮ ರೈ ಕೆದಂಬಾಡಿಗುತ್ತು, ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಫ್ರೆಂಡ್ಸ್ ಸ್ನೇಹನಗರ ತಂಡದಿಂದ ಸುಡುಮದ್ದು ಪ್ರದರ್ಶನ ನೆರವೇರಲ್ಪಟ್ಡಿತು.
ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಅರುಣ್ ಕ್ಯಾಂಪ್ಕೋ, ಗೌರವಾಧ್ಯಕ್ಷ ರಾಜೇಂದ್ರ ಕೆ.ಮೆಸ್ಕಾಂ, ಕಾರ್ಯದರ್ಶಿ ಶಿವಕುಮಾರ್ ಹೆಗ್ಡೆ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.






