ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವದುರು ನಿಮಿತ್ತ ನಿರ್ಮಿಸಲಾದ ಅನಧಿಕೃತ ಗುಡಿಸಲುಗಳನ್ನು ತೆರವುಗೊಳಿಸುವಂತೆ ಎಸ್ ಡಿಪಿಐ ವತಿಯಿಂದ ಬೆಳ್ತಂಗಡಿ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.

ರಾಜ್ಯಾದ್ಯಂತ ಜೆ ಸಿ ಎಂ ಯೋಜನೆಯಡಿ ಕಲಸ ನಿರ್ವಹಿಸುತ್ತಿರುವ ಕಾಮಗಾರಿಯ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಗುಡಿಸಲುಗಳನ್ನು ನಿರ್ಮಿಸಿ ನೆಲೆಸಿರುವುದು ಕಂಡುಬಂದಿದೆ. ಇದರಿಂದ ಪಂಚಾಯತ್ ಆವರಣದ ಶುಚಿತ್ವ ಹದಗೆಟ್ಟಿದ್ದು, ಗ್ರಾಮಸ್ಥರು ಹಾಗೂ ಪಂಚಾಯತ್ಗೆ ಆಗಮಿಸುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಎಸ್ ಡಿ ಪಿಐ ಆರೋಪಿಸಿದೆ.



ಈ ವಿಷಯವನ್ನು ಈಗಾಗಲೇ ಗ್ರಾಮ ಸಭೆಯಲ್ಲಿ ಪ್ರಸ್ತಾಪಿಸಲಾದರೂ, ಇನ್ನೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಮರು ದಿನಗಳಲ್ಲಿ ಗುಡಿಸಲುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಇದರಿಂದ ಸಾರ್ವಜನಿಕ ಸೌಕರ್ಯಗಳಿಗೆ ತೀವ್ರ ತೊಂದರೆ ಉಂಟಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಹೀಗಾಗಿ ಗ್ರಾಮಸಭೆಯ ನಿರ್ಣಯದಂತೆ, ಗುಡಿಸಲುಗಳನ್ನು ತಕ್ಷಣ ತೆರವುಗೊಳಿಸಿ ಪಂಚಾಯತ್ ಆವರಣವನ್ನು ಶುಚಿಗೊಳಿಸುವಂತೆ ಎಸ್ ಡಿಪಿಐ ಬೆಳ್ತಂಗಡಿ ತಹಶೀಲ್ದಾರ್ರನ್ನು ಆಗ್ರಹಿಸಿದೆ.




