ಪುತ್ತೂರು: ದ.ಕ. ಜಿಲ್ಲೆಯಲ್ಲಿರುವ ದಕ್ಷ ಪೆÇಲೀಸ್ ಅಧಿಕಾರಿಗಳ ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡಿ ವರ್ಗಾವಣೆಗೆ ಮುಂದಾಗುತ್ತಿರುವುದಕ್ಕೆ ಸಾಮಾಜಿಕ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ನಿರಂತರ ಎರಡು ವರ್ಷಗಳ ಕಾಲ ಆಂಜನೇಯ ರೆಡ್ಡಿ ಅವರು ಸಾಮಾಜಿಕವಾಗಿ ಒಳ್ಳೆ ಕೆಲಸ ಮಾಡಿದ್ದು ಹಾಗೂ ಪೆÇಲೀಸ್ ಠಾಣೆಯಲ್ಲಿ ಸಹ ಒಳ್ಳೆಯ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಆದರೆ, ರಾಜಕಾರಣಿಗಳ ಹಸ್ತಕ್ಷೇಪದಿಂದ ಅವರನ್ನು ಸುಬ್ರಹ್ಮಣ್ಯ ಪೆÇಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಶರತ್ ಶೆಟ್ಟಿ ಹೇಳಿದ್ದಾರೆ.

ಶರತ್ ಕುಮಾರ್ ಪುತ್ತೂರು

ಅಂತೆಯೇ, ಮಂಗಳೂರು ಪೋಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರ ವರ್ಗಾವಣೆ ಪ್ರಯತ್ನಗಳು ನಡೆಯುತ್ತಿವೆ. ದಕ್ಷಿಣ ಕನ್ನಡವನ್ನು ಡ್ರಗ್ಸ್ ಮುಕ್ತ ಜಿಲ್ಲೆಯಾಗಿಸುವಲ್ಲಿ ಅವರ ಪ್ರಯತ್ನ ಬಹಳಷ್ಟಿದೆ. ಮಂಗಳೂರಿನಲ್ಲಿ ಗಲಾಟೆ ಹಾಗೂ ವೇಶ್ಯಾವಾಟಿಕೆ, ಮಸಾಜ್ ಪಾರ್ಲರ್ ದಂಧೆಗಳನ್ನು ನಿಲ್ಲಿಸಿ ಯಾವುದಕ್ಕೂ ಅವಕಾಶ ಕೊಡದೆ ಪ್ರಾಮಾಣಿಕವಾಗಿ ಕಮಿಷನರ್ ಕೆಲಸ ಮಾಡುತ್ತಿದ್ದಾರೆ. ಅದನ್ನು ಸಹಿಸಿಕೊಳ್ಳಲಾಗದೆ ನಮ್ಮ ರಾಜಕಾರಣಿಗಳು ವರ್ಗಾವಣೆಯ ಕುತಂತ್ರ ನಡೆಸುತ್ತಿದ್ದಾರೆ. ಇದು ಖಂಡನೀಯ ಎಂದು ಶರತ್ ಶೆಟ್ಟಿ ತಿಳಿಸಿದ್ದಾರೆ.

ಹಾಗಾಗಿ ಅವರ ಒಳ್ಳೆ ಕೆಲಸಕ್ಕೆ ನಾವೆಲ್ಲರೂ ಅವರನ್ನು ಇನ್ನ ಉಳಿದಿರುವ ಕಾಲ ಇಲ್ಲೆ ಉಳಿಸಿಕೊಳ್ಳುವ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥನೆ ಮಾಡೋಣ ಯಾಕೆ ನಾವು ದೇವರಲ್ಲಿ ಪ್ರಾರ್ಥನೆ ಮಾಡಬೇಕೆಂದರೆ ರಾಜಕಾರಣಿಗಳ ಜೊತೆ ಮಾತನಾಡಿ ನಮಗೆ ಬೆಲೆ ಇಲ್ಲ ಹಾಗಾಗಿ ನಾವು ದೇವರ ಮೊರೆ ಹೋಗಬೇಕಾಗಿದೆ ನಾನು ನೆನ್ನೆ ರಾತ್ರಿ ಟಿವಿ ಚಾನೆಲ್ ನಲ್ಲಿ ನೋಡ್ತಾ ಇರುವಾಗ ಅವರ ವರ್ಗಾವಣೆ ಬರುತ್ತಿತ್ತು ನನಗೆ ತುಂಬಾ ಬೇಸರವಾಗಿ ನಾನು ನೇರವಾಗಿ ಶ್ರೀ ಸಿಗಂದೂರು ಚೌಡೇಶ್ವರಿ ಸ್ಥಾನಕ್ಕೆ ಹೋಗಿ ಅವರ ಹೆಸರಿನಲ್ಲಿ ನಾನು ಪ್ರಾರ್ಥನೆ ಸಲ್ಲಿಸಿ ಬಂದಿದ್ದೇನೆ ದಯವಿಟ್ಟು ಅವರನ್ನು ನಾವೆಲ್ಲರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ ಎಂದು ಹೇಳಿದರು.

Leave a Reply

Your email address will not be published. Required fields are marked *