ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ತಾರಿದೊಟ್ಟು ಪ್ರದೇಶದ ತೋಟವೊಂದರಲ್ಲಿ ಅಪರೂಪದ ಚಿಪ್ಪು ಹಂದಿಯೊಂದು ಕಾಣಿಸಿಕೊಂಡಿದೆ.

ತಾರಿದೊಟ್ಟುದ ಹರೀಶ್ ರೈ ಎಂಬವರ ಮನೆಯ ಬಳಿಯ ತೋಟದಲ್ಲಿ ಚಿಪ್ಪುಹಂದಿಯೊಂದು ಓಡಾಡುತ್ತಿದೆ. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಅದರಂತೆ ವೇಣೂರು ವಲಯ ಅರಣ್ಯಾಧಿಕಾರಿ ಭರತ್ ಯು.ಜಿ. ಮಾರ್ಗದರ್ಶನದಲ್ಲಿ ತಂಡ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿ ಅದನ್ನು ಬೋನಿಗೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ವೇಣೂರು ಅರಣ್ಯ ಇಲಾಖೆಯ ತಂಡ, ಈ ಅಪರೂಪದ ಚಿಪ್ಪುಹಂದಿಯನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸ್ಥಳೀಯರು ಕೈಜೋಡಿಸಿದ್ದರು.

