ಈಶ್ವರ ಮಂಗಳ: ಹನುಮಗಿರಿಯಲ್ಲಿರುವ ಕೋದಂಡರಾಮ ಹಾಗೂ ಪಂಚಮುಖಿ ಆಂಜನೇಯ ಕ್ಷೇತ್ರದ ಬ್ರಹ್ಮಕಳಶ ಮಹೋತ್ಸವದ ಅಂಗವಾಗಿ ರಾಘವೇಶ್ವರ ಭಾರತಿ ಮಹಾಸ್ವಾಮಿಗಳಿಗೆ ಫಲಪುಷ್ಪ ಸಮರ್ಪಿಸಿ ಆಹ್ವಾನಿಸಲಾಯಿತು.

ಈ ವೇಳೆ ಹನುಮಗಿರಿ ಕ್ಷೇತ್ರದ ಟ್ರಸ್ಟಿಗಳಾದ ರಘುರಾಜ್ ಕೆ.ಎಂ., ಶಿವರಾಮ್ ಶರ್ಮ, ಬ್ರಹ್ಮಕಳಶ ಸಮಿತಿಯ ಉಪಾಧ್ಯಕ್ಷ ರವಿಕಿರಣ್ ಶೆಟ್ಟಿ ಬೆದ್ರಾಡಿ, ಪ್ರಧಾನ ಕಾರ್ಯದರ್ಶಿ ಆರ್.ಸಿ. ನಾರಾಯಣ ರೆಂಜ, ನಹುಷ್ ಭಟ್ ಹಾಗೂ ಭಜನಾ ಸಹ ಸಂಚಾಲಕಿ ಪರಮೇಶ್ವರಿ ಭಟ್ ಬಬ್ಬಿಲಿ ಉಪಸ್ಥಿತರಿದ್ದರು.

ಬ್ರಹ್ಮಕಳಶ ಮಹೋತ್ಸವಕ್ಕೆ ಶುಭ ಹಾರೈಸಿದ ಸ್ವಾಮೀಜಿಯವರು ಕ್ಷೇತ್ರದಲ್ಲಿ ನಡೆಯಲಿರುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಲಿ ಎಂದು ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ ಬ್ರಹ್ಮಕಳಶ ಮಹೋತ್ಸವದ ವೇಳೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿ ಭಕ್ತರಿಗೆ ಆಶೀರ್ವಾದ ನೀಡುವಂತೆ ಸಮಿತಿ ಸದಸ್ಯರು ಸ್ವಾಮೀಜಿಯವರನ್ನು ಕೋರಿದರು.

Leave a Reply

Your email address will not be published. Required fields are marked *