ಪುತ್ತೂರು, ಡಿ.23 : ಯುವಕರು ದೈರ್ಯ ತೆಗೆದುಕೊಂಡು ಮುಂದಡಿ ಇಡಬೇಕು. ಈ ಪೈಪೋಟಿ ಯುಗದಲ್ಲಿಯು ಯು.ಆರ್ ಪ್ರಾಪರ್ಟೀಸ್ ಬೆಳೆದು ನಿಂತ ಎತ್ತರ ಅಪೂರ್ವವಾದದು ಎಂದು ಮಾಜಿ ಕಾನೂನು ಸಚಿವ ಮಾಧು ಸ್ವಾಮಿ ಹೇಳಿದರು.
ಯು.ಆರ್ ಪ್ರಾಪರ್ಟೀಸ್ ಪುತ್ತೂರು ಮತ್ತು ಶ್ರೀ ನಾಗರಕ್ತೇಶ್ವರಿ ಪ್ರತಿಷ್ಠಾನ ಬೆದ್ರಾಳ ಇದರ ವತಿಯಿಂದ ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಶ್ರೀ ಹೈಟ್ಸ್ ಅನಾವರಣಗೈದು ಮಾತನಾಡಿದರು.

ಸಾಧನೆ ಮಾಡಲು ಗುರಿ ಇರಬೇಕು. ಗುರಿ ತಲುಪಲು ಪರಿಶ್ರಮ ಇರಬೇಕು. ಈ ಎಲ್ಲದರ ನಡುವೆ ಸಾಧನೆ ಹೇಗೆ ಮಾಡಿದ್ದೀರಿ ಎನ್ನುವುದು ಬಹು ಮುಖ್ಯ ಸಂಗತಿ ಎಂದರು.

ಜನರ ಅಗತ್ಯತೆ ಗಳನ್ನು ಮನಗಂಡು ಯಶಸ್ಸು ಸಾಧಿಸುವುದು ಸುಲಭ ಅಲ್ಲ. ಮನಸ್ಸು ನಿಯಂತ್ರಣದಲ್ಲಿ ಇಟ್ಟುಕೊಂಡು ಹಂತ ಹಂತವಾಗಿ ಪ್ರಗತಿ ಸಾಧಿಸಬೇಕು. ಕರಾವಳಿ ಭಾಗದವರು ರಾಜ್ಯದ ಉಳಿದ ಭಾಗದ ಕಡೆಯಲ್ಲಿಯು ಬಂಡವಾಳ ಹೂಡಿ ಎಂದ ಅವರು ಸರಕಾರದ ಹಂತದಲ್ಲಿ ರೂಪುಗೊಳ್ಳುವ ಕಾನೂನು ಕೆಲವೊಮ್ಮೆ ಜನರಿಗೆ ತೊಂದರೆ ಆದದ್ದು ಇದೆ. ಕಾನೂನು ಜನರ ಪರ ಇರಬೇಕು ಅನ್ನುವುದು ನನ್ನ ಯೋಚನೆ ಎಂದರು.
ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆಗೈದ ಗಣೇಶ್ ಬೀಡಿ ವರ್ಕ್ಸ್ ಆಡಳಿತ ನಿರ್ದೇಶಕ ಡಾ. ಜಗನ್ನಾಥ ಶೆಣೈ ಮಾತನಾಡಿ ಯಾವುದೇ ಕೆಲಸವಾದರೂ ತನ್ನ ಕೆಲಸ ಎನ್ನುವ ಭಾವನೆಯಿಂದ ಮಾಡಬೇಕು. ಉಜ್ವಲ್ ಅವರ ತಂದೆ ಗಣೇಶ್ ಬೀಡಿ ಸಂಸ್ಥೆಯಲ್ಲಿ ಪ್ರಾಮಾಣಿಕವಾಗಿ ದುಡಿದವರು. ಅದರ ಪ್ರತಿಫಲ ಮಗನಿಗೆ ಸಿಕ್ಕಿದೆ. ಇನ್ನೊಬ್ಬರಿಗೆ ಸಹಾಯ ಮಾಡುವ ಗುಣದ ಮೂಲಕ ಉಜ್ವಲ್ ಪ್ರಭು ಬೆಳೆದು ನಿಂತಿರುವುದು ಖುಷಿ ಸಂಗತಿ. ಇನ್ನೊಬ್ಬರಿಗೆ ಕೆಲಸ ನೀಡುವಷ್ಟರ ಮಟ್ಟಿಗೆ ಬೆಳೆದು ನಿಂತಿರುವುದು ಶ್ಲಾಘನೀಯ. ಅವರ ಯು.ಆರ್ ಪ್ರಾಪರ್ಟೀಸ್ ಜಗದೊದ್ದಗಲಕ್ಕೂ ಪಸರಿಸಲಿ ಎಂದರು.





ಯು.ಆರ್. ಪ್ರಾಪರ್ಟಿಸ್ ಆಡಳಿತ ನಿರ್ದೇಶಕ ಉಜ್ವಲ್ ಪ್ರಭು ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಶ್ರಮದಿಂದ ಯಶಸ್ಸು ಸಾಧ್ಯವಾಗಿದೆ. ನಾನು ನಿಮಿತ್ತ ಮಾತ್ರ. ಎಲ್ಲರ ಸಹಕಾರದಿಂದ ಈ ಹಂತಕ್ಕೆ ತಲುಪಿದ್ದೇನೆ. ಇದು 19 ನೇಯ ಪ್ರಾಜೆಕ್ಟ್ ಎಂದರು.
ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಗುಣರಂಜನ್ ಶೆಟ್ಟಿ ಸಿಂಧೂರ ಪಾರ್ಕ್ ಲೋಕಾರ್ಪಣೆಗೈದು ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಶ್ರೀಮಾ ಸೆಲೆಸ್ಟಿಯಲ್ ಅನಾವರಣಗೊಳಿಸಿದರು.
ಸುಸಜ್ಜಿತ ರಸ್ತೆ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರು, ಉದ್ಯಾನವನ, ವ್ಯಾಯಾಮ ಕೇಂದ್ರ ಮತ್ತು ಈಜುಕೊಳವನ್ನು ಈ ಬಡಾವಣೆ ಹೊಂದಿದ್ದು ಅಪೂರ್ವ ರೀತಿಯಲ್ಲಿ ಗಮನ ಸೆಳೆಯುತ್ತಿದೆ.
ಕ್ಷೇತ್ರದಲ್ಲಿ ಡಿ.೨೩ ರಂದು ಬೆಳಗ್ಗೆ ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಗಣಪತಿ ಹೋಮ, ನಾಗತಂಬಿಲ, ರಕ್ತೇಶ್ವರಿ ಸಪರಿವಾರ ದೈವಗಳಿಗೆ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಭಜನ ಕಾರ್ಯಕ್ರಮ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಭಂಡಾರ ತೆಗೆದು, ರಾತ್ರಿ ಶ್ರೀ ರಕ್ತೇಶ್ವರಿ ದೈವಕ್ಕೆ ನೇಮ, ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ವರ್ಣಾರ ಪಂಜುರ್ಲಿ ಹಾಗೂ ಪರಿವಾರ ದೈವಗಳಿಗೆ ನೇಮ ನೆರವೇರಿತು.


ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ಎಸ್. ಆರ್ ರಂಗಮೂರ್ತಿ, ಕುಂಕುಮ್ ಅಸೋಸಿಯೇಟ್ಸ್ ಆಡಳಿತ ನಿರ್ದೇಶಕ ಸಂತೋಷ್ ಕುಮಾರ್ ನಳೀಲು, ನಗರಸಭೆ ಅಧ್ಯಕ್ಷೆ ಲೀಲಾವತಿ, ಕ್ಯಾಂಪ್ಕೋ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ, ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು, ನಗರಸಭಾ ಸದಸ್ಯೆ ರೋಹಿಣಿ, ಉದ್ಯಮಿ ಶ್ರೀಕಾಂತ್ ಶೆಟ್ಟಿ ಮಂಗಳೂರು ಎಸಿಎಫ್ ಪ್ರವೀಣ್ ಚಂದ್ರ ಶೆಟ್ಟಿ, ಶ್ರೀ ನಾಗರಕ್ತೇಶ್ವರಿ ಪ್ರತಿಷ್ಠಾನ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಶೆಟ್ಟಿ,ನವೀನ್ ಕುಲಾಲ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.


