ಸುಬ್ರಹ್ಮಣ್ಯ, ಜ.8: ಕನ್ನಡ ಚಲನಚಿತ್ರ ರಂಗದ ಖ್ಯಾತ ನಟಿ ಶ್ರುತಿ ಅವರು ಗುರುವಾರ ಕುಟುಂಬ ಸಮೇತರಾಗಿ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.


ನಟಿ ಶ್ರುತಿ ಅವರೊಂದಿಗೆ ಅವರ ತಂದೆ, ತಾಯಿ, ಚಿಕ್ಕಮ್ಮ ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀ ದೇವಳದಲ್ಲಿ ಪಂಚಾಮೃತ ಮಹಾಭಿಷೇಕ ಸೇವೆಯನ್ನು ಸಲ್ಲಿಸಿದರು. ಬಳಿಕ ಸತ್ಯನಾರಾಯಣ ಅಸ್ರನ್ನ ಅವರು ತೀರ್ಥ ಹಾಗೂ ಶ್ರೀ ದೇವರ ಪ್ರಸಾದವನ್ನು ವಿತರಿಸಿದರು. ನಂತರ ನಟಿ ಶ್ರುತಿ ಅವರು ಹೊಸಳಿಗಮ್ಮ ದೈವದ ಗುಡಿಗೆ ತೆರಳಿ ದರ್ಶನ ಪಡೆದರು.




ಅನಂತರ ಶ್ರೀ ದೇವಳದ ಆಡಳಿತ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರು ಶಾಲು ಹೊದಿಸಿ ನಟಿ ಶ್ರುತಿ ಅವರನ್ನು ಗೌರವಿಸಿದರು.
ಈ ವೇಳೆ ವ್ಯವಸ್ಥಾಪನ ಸಮಿತಿ ಸದಸ್ಯರಾದ ಅಜಿತ್ ಪಾಲೇರಿ, ಸೌಮ್ಯ ಭರತ್, ಲೀಲಾ ಮನಮೋಹನ್, ಪ್ರವೀಣ ರೈ, ಮಾಸ್ಟರ್ ಪ್ಲಾನ್ ಸಮಿತಿಯ ಅಚ್ಚುತ ಗೌಡ ಬಳ್ಪ, ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ, ಸಹಾಯಕ ಅಧಿಕಾರಿ ಯೇಸುರಾಜ್, ಶಿಷ್ಟಾಚಾರ ಅಧಿಕಾರಿ ಜಯರಾಮರಾವ್, ಶಿಷ್ಟಾಚಾರ ವಿಭಾಗದ ಪ್ರಮೋದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಂತರ ನಟಿ ಶ್ರುತಿ ಅವರು ಶ್ರೀ ದೇವಳದಲ್ಲಿ ಭೋಜನ ಪ್ರಸಾದ ಸ್ವೀಕರಿಸಿ ತೆರಳಿದರು





