ಪುತ್ತೂರು :ಪುತ್ತೂರು ನಗರಠಾಣೆಯ ಎಸೈ ಆಂಜನೇಯ ರೆಡ್ಡಿ ಅವರನ್ನು ಸುಬ್ರಮಣ್ಯ ಪೊಲೀಸ್ ಠಾಣೆಗೆ ದಿಢೀರ್ ವರ್ಗಾವಣೆ ಮಾಡಲಾಗಿದೆ.





ಕಳೆದ ಕೆಲ ವರ್ಷಗಳಿಂದ ಪುತ್ತೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಇದೀಗ ಸುಬ್ರಹ್ಮಣ್ಯ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಪ್ರೀತಿ ಮತ್ತು ಪನಿಷ್‍ಮೆಂಟ್ ಚಿಂತನೆಯ ಆಂಜನೇಯ ರೆಡ್ಡಿ ಅವರು ತನ್ನ ಕರ್ತವ್ಯದ ಜಾಣ್ಮೆಯಿಂದ ಪುತ್ತೂರಿನಲ್ಲಿ ನಾಗರಿಕರ ಶ್ಲಾಘನೆಗೆ ಪಾತ್ರವಾಗಿದ್ದರು. ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಬದುಕಿನಲ್ಲಿ ಆಸಕ್ತಿ ಮೂಡಿಸುವ ಕೆಟ್ಟ ಚಟಗಳನ್ನು ದೂರೀಕರಿಸುವ ಪ್ರಕ್ರಿಯೆಯಲ್ಲಿ ಹೆಚ್ಚು ಆಸಕ್ತರಾಗಿದ್ದರು. ವಿವಿಧ ಸಂಘಟನೆಗಳ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಜನಸ್ನೇಹಿ ಪೊಲೀಸ್ ಎಂಬ ಮಾತಿಗೆ ಸಾಕ್ಷಿಯಾಗಿದ್ದರು.
ಇದೀಗ ಇವರನ್ನು ದಿಡೀರ್ ವರ್ಗಾವಣೆ ಮಾಡಿರುದನ್ನು ಕೇಳಿ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಇವರನ್ನು ವರ್ಗಾವಣೆ ಮಾಡಲು ಪುತ್ತೂರಿನ ಕೆಲ ರಾಜಕೀಯ ಮುಖಂಡರು ಭಾಗಿಯಾಗಿದ್ದಾರೆ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.




