ಸುಬ್ರಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಮಹೋತ್ಸವದ ಸಂಭ್ರಮದ ಅಂಗವಾಗಿ ಭಕ್ತ ಅಜಿತ್ ಶೆಟ್ಟಿ ಕಡಬ ಮತ್ತು ಅವರ ಕುಟುಂಬದವರು ಬ್ರಹ್ಮರಥದಲ್ಲಿರುವ ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಗಣಪತಿ ವಿಗ್ರಹಗಳಿಗೆ ಸುಮಾರು 7.5 ಕೆಜಿ ಬೆಳ್ಳಿಯಿಂದ ತಯಾರಿಸಿದ, 13 ಲಕ್ಷಕ್ಕೂ ಅಧಿಕ ಮೌಲ್ಯದ ಕವಚವನ್ನು ಸೇವಾ ರೂಪದಲ್ಲಿ ದೇವಳಕ್ಕೆ ಸಮರ್ಪಿಸಿದ್ದಾರೆ.




ಮಹೋತ್ಸವದ ಸಂದರ್ಭದಲ್ಲಿ ಭಕ್ತರು ಮತ್ತು ದೇವಸ್ತಾನದ ಆಡಳಿತ ಮಂಡಳಿಯವರು ಈ ಶ್ರದ್ಧಾ ನೈವೇದ್ಯವನ್ನು ಅಭಿನಂದಿಸಿದ್ದು, ದೇವರಿಗೂ ಭಕ್ತರಿಗೂ ಈ ಸೇವಾನೈವೇದ್ಯ ವಿಶೇಷ ಆಕರ್ಷಣೆಯಾಗಿತ್ತು.



