ಬೆಳ್ತಂಗಡಿ: ಚಲಿಸುತ್ತಿದ್ದ ಸರ್ಕಾರಿ ಬಸ್ಸೊಂದರ ಬಾಗಿಲು ಏಕಾಏಕಿ ತೆರೆದು ಸಹೋದರಿಯರಿಬ್ಬರು ರಸ್ತೆಗೆ ಬಿದ್ದು ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಸಮೀಪದ ರೇಷ್ಮೆ ರೋಡ್ನಲ್ಲಿ ಮಂಗಳವಾರ (ಮಾ.31) ನಡೆದಿದೆ.
ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಚರಿಷ್ಮಾ, ಪಿಯುಸಿ ವಿದ್ಯಾರ್ಥಿನಿ ಚಸ್ಮಿಕಾ ಗಾಯಗೊಂಡವರು. ಗೇರುಕಟ್ಟೆಯಿಂದ ಬೆಳ್ತಂಗಡಿ ಕಡೆಗೆ ಬಸ್ ಸಂಚರಿಸುತ್ತಿತ್ತು. ರೇಷ್ಮೆ ರೋಡ್ ಬರುತ್ತಿದ್ದಂತೆ ಬಸ್ ಬಾಗಿಲು ಏಕಾಏಕಿ ತೆರೆದಿದೆ. ಪರಿಣಾಮ ಬಸ್ ಬಾಗಿಲ ಬಳಿಯಿದ್ದ ಸಹೋದರಿಯರಿಬ್ಬರು ರಸ್ತೆಗೆ ಬಿದ್ದಿದ್ದಾರೆ.





ಇವರಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಚರಿಷ್ಮಾ ಪಬ್ಲಿಕ್ ಪರೀಕ್ಷೆ ಬರೆಯಲು ಎಕ್ಸಾಂ ಸೆಂಟರ್ಗೆ ಹೋಗುತ್ತಿದ್ದಳು. ರಸ್ತೆಗೆ ಬಿದ್ದ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣ ಪ್ರಾಥಮಿಕ ಚಿಕಿತ್ಸೆ ಪಡೆದ ಆಕೆ ಪರೀಕ್ಷೆ ಬರೆಯಲು ತೆರಳಿದ್ದಾಳೆ ಎನ್ನಲಾಗಿದೆ.




