ಪುತ್ತೂರು: ಗುತ್ತಿಗಾರು ಗ್ರಾಮದ ಕಮಿಲ ಮಾಧವ–ವೀಣಾ ದಂಪತಿಯ ಒಂದೂವರೆ ತಿಂಗಳ ಗಂಡು ಮಗು ನಿಶ್ಚಿತ್ ಅಸ್ವಸ್ಥಗೊಂಡು ಡಿಸೆಂಬರ್ 9ರಂದು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಮಗುವಿನ ತಾಯಿ ವೀಣಾ ಅವರು ಮಗುವಿನೊಂದಿಗೆ ಸವಣೂರಿನ ಪುಣ್ಣಪ್ಪಾಡಿ ಗ್ರಾಮದ ಒಡಂತರ್ಯದ ತವರಿನಲ್ಲಿದ್ದುಕೊಂಡಿದ್ದರು. ಡಿಸೆಂಬರ್ 5ರಂದು ಮಗುವಿಗೆ ವಾಂತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಂಬ್ರಾದ ಖಾಸಗಿ ಕ್ಲಿನಿಕ್‌ನಿಂದ ಔಷಧಿ ತರಲಾಗಿತ್ತು. ನಂತರ ರಾತ್ರಿ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಯಿತು.

ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ವೈದ್ಯರು ಪರೀಕ್ಷಿಸಿದಾಗ ಮಗು ಕೊನೆಯುಸಿರೆಳೆದಿರುವುದಾಗಿ ಘೋಷಿಸಿದ್ದಾರೆ.

ಈ ಸಂಬಂಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *