ಉಡುಪಿ : ಮಣ್ಣಿ ನ ಅರೋಗ್ಯ ಸಂರಕ್ಷಣೆ ಯಿಂದ ಮನುಷ್ಯ ನ ಅರೋಗ್ಯ ಮತ್ತು ಜೀವನ ನಿಂತಿದೆ ಕಾಪು ತಾಲೂಕು ಕೃಷಿ ಪ್ರಶಸ್ತಿ ವಿಜೇತ ನಿತ್ಯಾನಂದ ನಾಯಕ್ ರೈತರಿಗೆ ಕಿವಿ ಮಾತು ಹೇಳಿದರು.

ಉಡುಪಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಉಡುಪಿ, ರೈತ ಸಂಪರ್ಕ ಕೇಂದ್ರ ಕಾಪು 2025-26 ನೇ ಸಾಲಿನ ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ ರೈತರಿಗೆ ಮಾರ್ಗದರ್ಶನ ಘಟಕದಡಿ, ಮಣ್ಣು ಪರೀಕ್ಷೆ ಆಧಾರಿತ ಬೆಳೆ / ಪೊ (ಕಾಂಶಗಳ ಶಿಫಾರಸ್ಸು ಕುರಿತ ವಿಶ್ವ ಮಣ್ಣಿ ನ ಅರೋಗ್ಯ ಅಭಿಯಾನ ರೈತ ಸಂಪರ್ಕ ಕೇಂದ್ರ ಇವರು ಮಟ್ಟು ವಿನಲ್ಲಿ ರೈತರ ಜೊತೆಗೆ ಪ್ರತ್ಯಾಕ್ಸಿ ಕ ವಾಗಿ ಕಾರ್ಯಕ್ರಮ ಹಮ್ಮಿ ಕೊಳ್ಳಲಾಯಿತು. ಇದರ ಉದ್ದೇಶ ಮಣ್ಣು ಮನುಕುಲಕ್ಕೆ ಎಷ್ಟು ಅನಿವಾರ್ಯ ಎಂಬುದನ್ನು ತಿಳಿಸುವುದಾಗಿದೆ. ಅಲ್ಲದೇ ರಾಸಾಯನಿಕ ಗೊಬ್ಬರಗಳು, ಅರಣ್ಯನಾಶ, ತ್ಯಾಜ್ಯಗಳ ವಿಲೇಯವಾರಿ, ಅತಿಯಾದ ಪ್ಲಾಸ್ಟಿಕ್ ಮಣ್ಣಿಗೆ ಸೇರುತ್ತಿರುವುದು ಇವೆಲ್ಲವೂ ಮಣ್ಣನ್ನು ಕಲುಷಿತಗೊಳಿಸುತ್ತಿವೆ. ಇದರ ಬಗ್ಗೆ ಅರಿವು ಮೂಡಿಸುವುದೇ ಈ ಆಚರಣೆಯ ಉದ್ದೇಶವಾಗಿದೆ.

ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಅಂಕಿ ಅಂಶಗಳ ಪ್ರಕಾರ ನಾವು ಸೇವಿಸುವ ಆಹಾರದ ಪೈಕಿ ಶೇ 95ರಷ್ಟು ಆಹಾರಗಳನ್ನು ಮಣ್ಣಿನಿಂದ ಪಡೆಯುತ್ತೇವೆ. ವಿಶ್ವದಾದ್ಯಂತ ಶೇ 33 ರಷ್ಟು ಮಣ್ಣು ಕಲುಷಿತವಾಗಿದೆ.

2 ರಿಂದ 3 ಸೆಂ.ಮೀ. ಮಣ್ಣು ಉತ್ಪತ್ತಿಯಾಗಲು, ಕನಿಷ್ಟ 1 ಸಾವಿರ ವರ್ಷಗಳವರೆಗೆ ತೆಗೆದುಕೊಳ್ಳಬಹುದು. ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ 18 ಪೋಷಕಾಂಶಗಳ ಪೈಕಿ 15 ಪೋಷಕಾಂಶಗಳನ್ನು ಮಣ್ಣು ಪೂರೈಸುತ್ತದೆ. ಭೂಮಿಯ ಮೇಲಿರುವ ಜನಸಂಖ್ಯೆಗಿಂತ ಹೆಚ್ಚು ಜೀವಿಗಳು ಒಂದು ಚಮಚ ಮಣ್ಣಿನಲ್ಲಿವೆ. ಸುಸ್ಥಿರ ಮಣ್ಣಿನ ನಿರ್ವಹಣೆಯಿಂದಾಗಿ ಶೇ 58ರಷ್ಟು ಹೆಚ್ಚಿನ ಆಹಾರ ಉತ್ಪಾದಿಸಬಹುದು. ಪೂರ್ಣ ಜೀವ ಸಂಕುಲಕ್ಕೆ ಮಣ್ಣು ಮತ್ತು ನೀರು ಉಳಿಸದಿದ್ದರೆ ಮುಂದೆ ಏನು ಎಂಬ ಒಂದು ಪ್ರಶ್ನೆ ಇದೆ ನಾವೆಲ್ಲ ಜೊತೆ ಯಾಗಿ ಮಣ್ಣಿ ನ ನೀರಿನ ಮತ್ತು ಜೀವಿ ಗಳ ಅರೋಗ್ಯ ಕಾಪಾಡೋಣ.

ಕಾರ್ಯಕ್ರಮ ದಲ್ಲಿ ಕೋಟೆ ಪಂಚಾಯತ್ ಅಧ್ಯಕ್ಷರು ಪ್ರಮೀಳಾ ಜತ್ತನ್ನ, ಕಾಪು ಕೃಷಿ ಅಧಿಕಾರಿ ಮತ್ತು ಕೃಷಿ ಸಕಿಯರು ಮತ್ತು ನೂರಾರು ಸ್ಥಳೀಯ ರೈತರು ಭಾಗವಹಿಸಿದರು.

Leave a Reply

Your email address will not be published. Required fields are marked *