ನವೆಂಬರ್ 13 ಮತ್ತು 14 ರಂದು ಎರಡು ದಿನಗಳ ಮಂಗಳೂರು ಪ್ರವಾಸಲ್ಲಿದ್ದ ನೈರುತ್ಯ ರೈಲ್ವೇ ಪ್ರಧಾನ ವ್ಯವಸ್ಥಾಪಕ ಶ್ರೀ ಮುಕುಲ್ ಶರಣ್ ಮಾಥುರ್ ಹಾಗೂ ಮೈಸೂರು ವಿಭಾಗೀಯ ರೈಲು ವ್ಯವಸ್ಥಾಪಕ ಶ್ರೀ ಮುಧಿತ್ ಮಿತ್ತಲ್ ನವೆಂಬರ್ 14ರಂದು ಕುಕ್ಕೇ ಶ್ರೀ ಸುಬ್ರಮಣ್ಯ-ಮಂಗಳೂರು ರೈಲು ಬಳಕೆ ದಾರರ ಹಿತರಕ್ಷಣಾ ವೇಧಿಕೆ, ಪುತ್ತೂರು ಇದರ ಸಂಚಾಲಕ ಶ್ರೀ ಸುದರ್ಶನ್ ಪುತ್ತೂರು ಹಾಗೂ ಕಡಬ ತಾಲೂಕು ನೆಟ್ಟಣ ರೈಲು ನಿಲ್ದಾಣ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ರಾದ ಶ್ರೀ ಪ್ರಸಾದ್ ನೆಟ್ಟಣ ಮತ್ತು ಬೆಂಬಲಿಗರು ಭೇಟಿ ಮಾಡಿ ನೈರುತ್ಯ ರೈಲ್ವೇ ಮಂಗಳೂರು ಬಾಗದ ರೈಲು ಸಂಚಾರ ಮತ್ತು ನಿಲ್ದಾಣ ಅಭಿವೃದ್ಧಿ ಬೇಡಿಕೆಗಳು, ದೂರುಗಳು, ಸಮಸ್ಯೆಗಳಿಗೆ ಸಂಭಂದಿಸಿದ ಮನವಿಗಳನ್ನು ಸಲ್ಲಿಸಿ ವಿಸ್ತ್ರತ ಮಾತುಕತೆ ನಡೆಸಲಾಯಿತು.

ಸುಬ್ರಮಣ್ಯ ರೈಲು ನಿಲ್ದಾಣ ವನ್ನು ಅಮೃತ್ ಭಾರತ್ ಯೋಜನೆಯಲ್ಲಿ ಕೈಗೆತ್ತಿಕೊಳ್ಳ ಲಾದ ಕಾಮಗಾರಿಗಳ ಕಳಪೆ ಗುಣಮಟ್ಟ ಮತ್ತು ಒಂದು ವರ್ಷಕ್ಕಿಂತಲೂ ಜಾಸ್ತಿ ವಿಳಂಭ ನೀತಿ ಬಗ್ಗೆ ತರಾಟೆಗೆತ್ತಿಕೊಳ್ಳ ಲಾಯಿತು. ನಿಲ್ದಾಣ ಸುತ್ತ ಹರಡಲಾದ ಕಾಮಗಾರಿ ನಿರುಪಯೋಗಿ ವಸ್ತುಗಳು ಪ್ರಯಾಣಿಕರ ಒಡಾಟಕ್ಕೆ ಅಡ್ಡಿಯಾಗುತ್ತಿದ್ದು ಕಾಮಗಾರಿ ಕಾರಣಕ್ಕೆ ಮೂಲಭೂತ ಸೌಕರ್ಯಗಳ ಕೊರತೆ , ಬಾಗಿಲುಗಳಿಲ್ಲದ ಮಹಿಳೆ ಮತ್ತು ಪುರುಷರ ಶೌಚಾಲಯ ದುಸ್ಥಿತಿ, ಬಹು ಸಂಖ್ಯೆಯ ಪ್ರಯಾಣಿಕರಿಗೆ ಬೆರಳೆಣಿಕೆಯ ಶೌಚಾಲಯ ಕೊರತೆ, ಕೆಸರು ಮಡುಗಟ್ಟಿದ ಶೌಚಾಲಯ ಕಮೊಡುಗಳು, ವಿಶ್ರಾಂತಿ ಗೃಹದ ಕೆಟ್ಟು ಹೋದ ಬಾಗಿಲುಗಳು, ಸರ್ವಿಸ್ ಕ್ಯಾಂಟೀನ್ ಬೇಡಿಕೆಗಳನ್ನು ವಿವರಿಸಲಾಯಿತು. ನಿಲ್ದಾಣದ ಪ್ರವೇಶ ದ್ವಾರದಲ್ಲಿರುವ ದ್ವಿಪಥ ರಸ್ತೆಗೆ ಅಡ್ಡಲಾಗಿರುವ ಇಲಾಖೆ ವಸತಿಗೃಹ ತೇರುವು ಮಾಡುವುದು, ಮಳೆ ನೀರ ಚರಂಡಿಯಲ್ಲಿ ಹೂಳು ತುಂಬಿರುವುದನ್ನು ಗಮನಕ್ಕೆ ತರಲಾಯಿತು. ಪಾರ್ಕಿಂಗ್ ಗಾಗಿ ಬಸ್ಸುಗಳು, ಆಟೋ, ಟ್ಯಾಕ್ಸಿ ಗಳಿಗೆ ಜಾಗ ಗುರಿತಿಸುವಂತೆ ಕೋರಲಾಯಿತು.

ಪುತ್ತೂರು ನಿಲ್ದಾಣದ ಒಂದು ಮತ್ತು ಎರಡನೇ ಪ್ಲಾಟ್ ಪಾರಂಗೆ ಮೇಲಚಾವಣಿ , ಶೌಚಾಲಯ, ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಲ್ಪಿಸಲು ಮನವಿ ನೀಡಿ, ನಿಲ್ದಾಣದಲ್ಲಿ ಸ್ಥಾಪಿಸಲಾದ ವಿ.ಐ.ಪಿ. ವಿಶ್ರಾಂತಿ ಗೃಹವನ್ನು ಮೈಸೂರು ವಿಭಾಗೀಯ ರೈಲ್ವೇ ವ್ಯವಸ್ಥಾಪಕರು ರೈಲ್ವೇ ಪೊಲೀಸರಿಗೆ ವಿಶ್ರಾಂತಿ ಗಾಗಿ ನೀಡಿರುವುದರಿಂದ ಜನ ಪ್ರತಿನಿಧಿಗಳಿಗೆ, ವಿಶೇಷ ಅಧಿಕಾರಿಗಳಿಗೆ, ವೈದ್ಯಕೀಯ ಚಿಕಿತ್ಸೆಗಾಗಿ ಬರುವ ವೈದ್ಯರಿಗೆ ವಿಶ್ರಾಂತಿ ಪಡೆಯಲು ಅಡ್ಡಿಯಾಗಿದೆ ಎಂದು ದೂರನ್ನು ನೀಡಿ ಈ ಮೊದಲೇ ರೈಲ್ವೇ ಪೊಲೀಸರಿಗೆ ನೀಡಿರುವ ಎರಡು ವಸತಿಗ್ರಹ ಇರುವಾಗ ವಿ.ಐ.ಪಿ. ವಿಶ್ರಾಂತಿ ಗೃಹವನ್ನು ನೀಡಿರುವ ಔಚಿತ್ಯವೇನೆಂದು ಪ್ರಶ್ನಿಸಿ ವಿ.ಐ.ಪಿ. ವಿಶ್ರಾಂತಿ ಗೃಹವನ್ನು ಯಥಾ ಸ್ಥಿತಿ ಅತಿಥಿಗಳಿಗೇ ಕಾದಿರಿಸಬೇಕೆಂದು ಒತ್ತಾಯಿಸಲಾಯಿ. ನೇರಳಕಟ್ಟೆ ನಿಲ್ದಾಣ ದಲ್ಲಿ ಸ್ಥಳೀಯ ಸಾರ್ವಜನಿಕರಿಗೆ ನಿಲ್ದಾಣ ದಾಟಲು ಮೇಲ್ದಾಟು ಕಾಲು ಸೇತುವೆ ಮತ್ತು ಸಂಜೆ ಮಂಗಳೂರಿಂದ ಆಗಮಿಸುವ ಪ್ಯಾಸೆಂಜರ್ ರೈಲಿಗೆ ನಿಲುಗಡೆಗೆ ಅಗ್ರಹಿಸಿ ರೈಲು ತಡೆ ಪ್ರತಿಭಟನೆಯ ಮುನ್ನೆಚ್ಚರಿಕೆ ನೋಟೀಸ್ ಸಲ್ಲಿಸಲಾಯಿತು. ಮಂಗಳೂರು ಸಮೀಪದ ನೈರುತ್ಯ ರೈಲ್ವೇ ಗಡಿಯಲ್ಲಿರುವ ಫರಂಗಿಪೇಟೆಯಲ್ಲಿ ಪೂರ್ಣ ಪ್ರಮಾಣದ ಕ್ರಾಸಿಂಗ್ ಮತ್ತು ರೈಲು ಹತ್ತುವ, ಇಳಿಯುವ ನಿಲ್ದಾಣ ಮಾಡಲು ಬೇಡಿಕೆ ಸಲ್ಲಿಸಲಾಯಿತು. ಒಟ್ಟಿಗೆ 5 ಪ್ರತ್ಯೇಕ ಮನವಿಗಳನ್ನು ಸಲ್ಲಿಸಲಾಯಿತು. ಪ್ರತಿಕ್ರಿಯಿಸಿದ ನೈರುತ್ಯ ರೈಲ್ವೇ ಪ್ರಧಾನ ವ್ಯವಸ್ಥಾಪಕ ಶ್ರೀ ಮುಕುಲ್ ಶರಣ್ ಮಾಥುರ್ ಹಾಗೂ ಮೈಸೂರು ವಿಭಾಗೀಯ ರೈಲು ವ್ಯವಸ್ಥಾಪಕ ಶ್ರೀ ಮುಧಿತ್ ಮಿತ್ತಲ್ ಎಲ್ಲಾ ಬೇಡಿಕೆಗಳನ್ನು ಪರಿಶೀಲನೆ ಮಾಡಿ ಪರಿಹಾರ ಒದಗಿಸುವ ಭರವಸೆ ನೀಡಿದರು.

Leave a Reply

Your email address will not be published. Required fields are marked *