ಪುತ್ತೂರು: ಇತ್ತೀಚೆಗೆ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜು ಇಲ್ಲಿ ನಡೆದಿರುವ ಅಂತರಾಷ್ಟ್ರೀಯ ಮಟ್ಟದ ಮಾಧ್ಯಮ ಸಮ್ಮೆಳನದಲ್ಲಿ ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಾದ ನಿಭಾ ಡಿ (ತೃತೀಯ ಜೆಇ), ದೀಕ್ಷಾ ಯು.ಜೆ (ತೃತೀಯ ಜೆಇ), ರಿತೇಶ್ ಅಮ್ಮುಂಜ (ತೃತೀಯ ಜೆಪಿ) ಹಾಗೂ ತ್ರಿಷಾ ಜಿ.ಆರ್ (ತೃತೀಯ ಜೆಇ) ಇವರು ಪಾಪ್ಯುಲಿಸಂ ಮೀಡಿಯಾ: ಪವರ್, ಫ್ಲಾಟ್ ಫಾರಂ ವಾಯ್ಸಸ್ ಇನ್ ಎ ಪೊಲರೈಸ್ಡ್ ವಲ್ರ್ಡ್ ಎನ್ನುವ ವಿಚಾರದ ಮೇಲೆ ಸಂಶೋಧನಾ ಪ್ರಬಂಧವನ್ನು ಮಂಡಿಸಿರುತ್ತಾರೆ. ಇವರಿಗೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿಭಾಗದ ಮುಖ್ಯಸ್ಥೆ ಭವ್ಯಾ.ಪಿ.ಆರ್ ನಿಡ್ಪಳ್ಳಿ ಮಾರ್ಗದರ್ಶನವನ್ನು ನೀಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ವೃಂದ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.









