ವಿಟ್ಲ : ಪಟ್ಟಣ ಪಂಚಾಯತ್ ನ 2ನೇ ಅವಧಿಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಸದಸ್ಯರಾದ ಅಶೋಕ್ ಕುಮಾರ್ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
28.11.2025ರಂದು ಪಟ್ಟಣ ಪಂಚಾಯಿತಿನ ಸಭಾಂಗಣದಲ್ಲಿ ನಡೆದ ಸ್ಥಾಯಿ ಸಮಿತಿಯ ಸಭೆಯಲ್ಲಿ ಅಶೋಕ್ ಕುಮಾರ್ ಶೆಟ್ಟಿ ಅವರು ಆಯ್ಕೆಯಾದರು. ನಾಲ್ಕು ಬಾರಿ ಗ್ರಾಮ ಪಂಚಾಯಿತಿ ಸದಸ್ಯರಾಗಿ,ಎರಡು ಬಾರಿ ಪಟ್ಟಣ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿರುವ ಇವರು ಹಿರಿಯ ಅನುಭವಿ ರಾಜಕಾರಣಿಯಾಗಿದ್ದು,ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಅಶೋಕ್ ಕುಮಾರ್ ಶೆಟ್ಟಿ ಅವರನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಸಂಜೀವ ಮಠಂದೂರು,ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ಮಾರ್ತ, ಮಂಡಲದ ನಿಕಟ ಪೂರ್ವ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ, ಮಂಡಲ ಉಪಾಧ್ಯಕ್ಷರುಗಳಾದ ಹರಿಪ್ರಸಾದ್ ಯಾದವ್, ವಿದ್ಯಾಧರ್ ಜೈನ್, ಕಾರ್ಯದರ್ಶಿ ಶ್ರೀ ಕೃಷ್ಣ,ವಿಟ್ಲ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಉದಯಕುಮಾರ್ ಅಲಂಗಾರ್, ಶಕ್ತಿ ಕೇಂದ್ರ ಸಂಚಾಲಕರುಗಳಾದ ಸದಾನಂದ ಗೌಡ ಸೇರಾಜೆ,ಶಿಶಿರ್ ಗೌಡ,ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ, ನಿರ್ದೇಶಕ ಮೋಹನ್ದಾಸ್ ಉಕ್ಕುಡ, ಪ್ರಮುಖರುಗಲಾದ ಪದ್ಮನಾಭ ಕಟ್ಟೆ, ಜಗದೀಶ್ ಪಾಣೆಮಜಲು, ಸುದರ್ಶನ್ ಪಡಿಯಾರ್ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೋಟ್ಟು, ಉಪಾಧ್ಯಕ್ಷೇ ಸಂಗೀತ ಪಾನಿ ಮಜಲು ತಾಯಿ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ರವಿ ಪ್ರಕಾಶ,ಸದಸ್ಯರಾದ ಅರುಣ್ ವಿಟ್ಲಾ, ಜಯಂತ್ ಸಿ ಎಚ್, ವಸಂತ್ ಕುಲಾಲ್, ಕೃಷ್ಣ ಎನ್, ರಕ್ಷಿತಾ ಸನತ್, ಸುನಿತಾ ಪೂಜಾರಿ, ವಿಜಯಲಕ್ಷ್ಮಿ ಪುಷ್ಪರಾಜ್ ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *