ಸಂವಿಧಾನದಲ್ಲಿ ಕಲಂ೧೯ರ ಅಡಿಯಲ್ಲಿ ನಾಗರಿಕರಿಗೆ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸಾತಂತ್ರ್ಯ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕುಗಳ ಮೇಲೆ ವಿಧೆಯಕ ನೇರ ದಾಳಿ ನಡೆಸುತ್ತದೆ. ದ್ವೇಷ ಭಾಷಣ ಎಂಬ ಪದಕ್ಕೆ ಸ್ಪಷ್ಟ ಹಾಗೂ ನಿಖರ ವ್ಯಾಖ್ಯಾನವಿಲ್ಲದೆ, ಅಸ್ಪಷ್ಟ ಮತ್ತು ಏಕಪಕ್ಷೀಯ ವ್ಯಾಖ್ಯಾನಗಳಿಗೆ ಅವಕಾಶ ಕಲ್ಪಿಸಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಪುತ್ತೂರು ಕಂದಾಯ ಇಲಖೆಯ ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ವಿಧೇಯಕವನ್ನು ವಿರೋಧಿಸಿ ಪತ್ರವನ್ನು ನೀಡಲಾಯಿತು.

ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷೆ ಲೀಲಾವತಿ ನಾಯ್ಕ್, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪ್ರಮ್ಮುಖರಾದ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ,ಬಿಜೆಪಿ ಗ್ರಾಮಾಂತರ ಉಪಾಧ್ಯಕ್ಷ ವಿದ್ಯಾಧರ್ ಜೈನ್,ಯುವರಾಜ್,ಸುರೇಶ್ ಆಳ್ವ, ರಾಜೇಶ್ ಬನ್ನೂರು, ವಿರೂಪಾಕ್ಷ ಮಚ್ಚಿಮಲೆ, ಹರಿಪ್ರಸಾದ್ ಯಾದವ್, ರಾಜೇಶ್ ಬಾಳೆಕಲ್ಲು, ಸುಂದರ ಪೂಜಾರಿ, ಶಶಿಧರ್ ನಾಯಕ್, ನಾಗೇಂದ್ರ ಬಾಳಿಗ, ಸಂತೋಷ್ ಕುಮಾರ್ ದರ್ಬೆ,ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *