ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಸಂಬಂಧಿಸಿದಂತೆ ಸರಕಾರವು ಪ್ರಾಧಿಕಾರ ರಚನೆ ಮಾಡಲು ಉದ್ದೇಶಿಸಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯದಲ್ಲಿ ಜನಜಾಗೃತಿ ಹಾಗೂ ಪ್ರತಿಭಟನಾ ಚಟುವಟಿಕೆಗಳು ವೇಗ ಪಡೆದಿವೆ.
ಇದರ ಭಾಗವಾಗಿ ಮಾರ್ಚ್ 17ರಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮಹತ್ವದ ಪೂರ್ವಭಾವಿ ಸಭೆ ನಡೆಯಿತು.





ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರು ಪ್ರಾಧಿಕಾರ ರಚನೆ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ನಿರ್ಧಾರವು ದೇವಾಲಯದ ಸ್ವಾಯತ್ತತೆ ಹಾಗೂ ಸ್ಥಳೀಯರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಸಭೆಯ ನೇತೃತ್ವ ವಹಿಸಿ ಮಾತನಾಡಿದ ಶಿವರಾಮ ಅವರು, ಪ್ರಾಧಿಕಾರ ರಚನೆಯಿಂದ ಉಂಟಾಗಬಹುದಾದ ಅನಾನುಕೂಲಗಳ ಕುರಿತು ವಿವರಿಸಿ, ಇದರ ವಿರುದ್ಧ ಸಂಘಟಿತ ಹೋರಾಟ ನಡೆಸುವ ಅಗತ್ಯವಿದೆ ಎಂದು ತಿಳಿಸಿದರು.



ಸಭೆಯಲ್ಲಿ ರವೀಂದ್ರ ಕುಮಾರ್ ರುದ್ರಪಾದ, ರಾಜೇಶ್ ಎಸ್.ಎನ್., ಪವನ್ ಕುಮಾರ್ ಎಂ., ಡಿ.,ಹೆಚ್.ಎಲ್. ವೆಂಕಟೇಶ್, ದಿನೇಶ್, ಸುಬ್ರಮಣ್ಯರಾವ್, ರವೀಂದ್ರ ಸುಬ್ರಹ್ಮಣ್ಯ, ಶೇಖರವಿಲದ್ವಾರ ವೆಂಕಟೇಶ್ ಶರ್ಮ, ಭವೀಶ್ ಐಎಟಿ, ಅನಿಲ್ ಡಿ’ಸೋಜ, ಕಾರ್ತಿಕ್ ಕಾಮತ್, ಭರತ್ ದೇವರಗದ್ದೆ, ಶೇಷಕುಮಾರ್, ದೀಪ, ಸತೀಶ್ ಕೂಜುಗೂಡು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮುಂದಿನ ಸಾರ್ವಜನಿಕ ಸಭೆಯನ್ನು ಮಾರ್ಚ್ 19ರಂದು ನಡೆಸಲು ನಿರ್ಧರಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಕರೆ ನೀಡಲಾಗಿದೆ.

