ಧರ್ಮ ಸಂರಕ್ಷಣೆ, ಸನತಾನ ಹಿಂದೂ ಧರ್ಮದ ಉಳಿದು, ಜನರ ಹೃದಯದಲ್ಲಿ ಧರ್ಮ ಜಾಗೃತಿಯಾಗಬೇಕಾದರೆ ಭಜನಾ ಮಂದಿರದoತಹ ಶ್ರದ್ಧಾಕೇಂದ್ರಗಳ ಅಗತ್ಯವಿದೆ ಎಂದು ಒಡಿಯೂರ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.





ಅವರು ಕೊಯಿಲ ಗ್ರಾಮದ ಸಬಳೂರು ಅಯೋಧ್ಯಾನಗರದಲ್ಲಿ ನವೀಕರಣಗೊಂಡಿರುವ ಶ್ರೀರಾಮ ಭಜನಾ ಮಂದಿರವನ್ನು ಲೋಕಾರ್ಪಣೆ ಮಾಡಿ ಬಳಿಕ ಆಶೀರ್ವಚನ ನೀಡಿದರು.
ನಮ್ಮನ್ನು ನಾವು ತಿಳಿಯುವ ಕೆಲಸವಾಗಬೇಕಾದರೆ ಅದಕ್ಕೆ ಸಂಸ್ಕಾರ ಬೇಕು, ಭಜನೆ ಎನ್ನುವುದರಲ್ಲಿ ಶ್ರೇಷ್ಠವಾದ ಸಂಸ್ಕಾರವಿದೆ, ಅದರಲ್ಲಿ ಬದುಕು ಕಟ್ಟುವ ಕೆಲಸ ಆಗುತ್ತದೆ. ಹಾಗಾಗಿ ಕಲಿಯುಗದಲ್ಲಿ ಭಜನೆ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದು ಹೇಳಿದ ಸ್ವಾಮೀಜಿ ಭಾರತದ ದೇಶದ ಮೌಲ್ಯ ತ್ಯಾಗ ಸೇವೆಯಲ್ಲಿ ಅಡಗಿದೆ, ಅದುವೇ ಅಧ್ಯಾತ್ಮಿಕತೆ, ರಾಮ ಅಂದರೆ ರಾಷ್ಟç, ರಾಷ್ಟç ಎಂದರೆ ರಾಮ, ತ್ಯಾಗ ಸೇವೆಯನ್ನು ಒಟ್ಟಿಗೆ ನೋಡಬೇಕಾದರೆ ನಾವು ರಾಮ ಮತ್ತು ಆಂಜನೆಯಲ್ಲಿ ಕಾಣ ಬೇಕು ಎಂದು ಹೇಳಿದರು.


ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಭಜನಾ ಮಂದಿರಗಳು ಊರಿನ ಹಿಂದೂ ಭಾಂದವರಲ್ಲಿ ಸಾಮಾರಸ್ಯ ಹಾಗೂ ಧರ್ಮ ರಕ್ಷಣೆಯ ಕಾರ್ಯಕ್ಕೆ ಪ್ರೇರಣೆ ನೀಡುತ್ತವೆ, ಅಯೋಧ್ಯಾನಗರದಲ್ಲಿ ನಿಮಾಣವಾಗಿರುವ ಭಜನಾ ಮಂದಿರ ಈ ಭಾಗದಲ್ಲಿ ಭಜನಾ ಕ್ರಾಂತಿಯನ್ನು ಮಾಡಿ ಧಾರ್ಮಿಕ ಪುನರುತ್ಥಾನಕ್ಕೆ ಪ್ರೇರಣೆ ನೀಡುತ್ತಿದೆ, ಇದು ಮುಂದುವರಿಯಲಿ ಎಂದರು.
ಶಾಸಕಿ ಭಾಗರಥಿ ಮುರುಳ್ಯ ಮಾತನಾಡಿ ಶ್ರೀ ರಾಮ ಭಜನಾ ಮಂದಿರ ಈ ಭಾಗದ ಯುವಕರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿ ದೇಶಕಟ್ಟುವ ಕಾರ್ಯ ಮಾಡುತ್ತಿದೆ ಎಂದರು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಭಜನಾ ಮಂದಿರ , ದೇವಸ್ಥಾನಗಳಂತಹ ಧರ್ಮ ಕೇಂದ್ರಗಳಲ್ಲಿ ರಾಜಕೀಯ ಇರಬಾರದು ಹಾಗಾದಾಗ ಮಾತ್ರ ಹಿಂದೂ ಧರ್ಮ ಉಳಿಯಲು ಸಾಧ್ಯ ಎಂದರು. ಕುಂದಾಪುರ ಮೂಡುಗಿಳಿಯಾರ್ ಜನಸೇವಾ ಟ್ರಸ್ಟ್ನ ಅಧ್ಯಕ್ಷ ವಸಂತ ಗಿಳಿಯಾರ್ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಶುಭ ಹಾರೈಸಿದರು. ಶ್ರೀರಾಮ ಸೇವಾ ಟ್ರಸ್ಟ್ ನ ಅಧ್ಯಕ್ಷ ಬೆಳಿಯಪ್ಪ ಗೌಡ ಅಧ್ಯಕ್ಷತೆವಹಿಸಿದ್ದರು. ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಸುಭಾಸ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಭಟ್ ಉಪ್ಪಂಗಳ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡವರನ್ನು ಹಾಗೂ ಆರ್ಥಿಕ ಸಹಕಾರ ನೀಡಿದವರನ್ನು ಗೌರವಿಸಲಾಯಿತು. ವಿಶೇಷ ಸೇವೆ ನೀಡಿದ ಕುಶಾಲಪ್ಪ ಗೌಡ ಕಡೆಂಬ್ಯಾಲ್ ಅವರನ್ನು ಸನ್ಮಾನಿಸಲಾಯಿತು.
ಭಜನಾ ಮಂದಿರದ ಅಧ್ಯಕ್ಷ ಕೆ.ಎಸ್.ಬಾಲಕೃಷ್ಣ ಗೌಡ ಸ್ವಾಗತಿಸಿದರು. ಶ್ರೀರಾಮ ಸೇವಾ ಟ್ರಸ್ಟ್ನ ಕಾರ್ಯದರ್ಶಿ ರಾಮಚಂದ್ರ ನಾಯ್ಕ ವಂದಿಸಿದರು. ದೈವಗಳ ಮಧ್ಯಸ್ಥ ಮನ್ಮಥ ಶೆಟ್ಟಿ ನಿರೂಪಿಸಿದರು. ಶ್ರೀ ರಾಮ ಭಜನಾ ಮಂದಿರದ ಕಾರ್ಯದರ್ಶಿ ರಾಧಾಕೃಷ್ಣ ನಾಯ್ಕ ಹಾಗೂ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಜಗದೀಶ್ ದೇಂತರ್ಪು ಸಹಕರಿಸಿದರು.
ಇದಕ್ಕೂ ಮುನ್ನ ಅಯೋಧ್ಯಾನಗರ ಶ್ರೀರಾಮ ಮಹಿಳಾ ಮತ್ತು ಮಕ್ಕಳ ಭಜನಾ ತಂಡದವರಿAದ ಕುಣಿತ ಭಜನೆ ಹಾಗೂ ಅರ್ಚಕ ನರಹರಿ ಉಪಧ್ಯಾಯ ಇರ್ಕಿಮಠ ಅವರ ನೇತೃತ್ವದಲ್ಲಿ ಸತ್ಯನಾರಾಯಣ ಪೂಜೆ ನಡೆಯಿತು.


