ಉಡುಪಿ: ಇರಾನ್-ಅಮೆರಿಕ, ಇಸ್ರೇಲ್ ದೇಶಗಳ ನಡುವಿನ
ಯುದ್ಧ ಪರಿಣಾಮ ಕರಾವಳಿ ಮೀನುಗಾರರಿಗೂ ತಟ್ಟುತ್ತಿದೆ.
ಯುದ್ಧದಿಂದಾಗಿ ಮೀನು ರಫ್ತು ಸ್ಥಗಿತಗೊಂಡಿರುವುದು ಮಾತ್ರವಲ್ಲದೆ, ಗ್ಯಾಸ್ ಕೊರತೆಯಿಂದಾಗಿ ಹೊಟೇಲ್‌ಗಳು ಮುಚ್ಚಲ್ಪಡುತ್ತಿದ್ದು ಪರಿಣಾಮವಾಗಿ ಮೀನಿನ ದರದಲ್ಲಿ ಭಾರೀ ಕುಸಿತವಾಗಿದೆ ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಮೀನಿನ ದರದಲ್ಲಿ ಸುಮಾರು 50-200 ರೂ.ವರೆಗೆ ಇಳಿಕೆಯಾಗಿದೆ. ಉಡುಪಿ ಮೀನು ಮಾರುಕಟ್ಟೆಯಲ್ಲಿ ಸುಮಾರು 10 ಮಂದಿ ಸಗಟು ವ್ಯಾಪಾರಿಗಳು ಸೇರಿದಂತೆ ನೂರಾರು ಮಹಿಳೆಯರು ಮೀನು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ.





ವಾಣಿಜ್ಯ ಅನಿಲದ ಕೊರತೆಯಿಂದ ಉಡುಪಿ ಜಿಲ್ಲೆಯ ನೂರಾರು ಮೀನಿನ ಹೊಟೇಲ್ ಮುಚ್ಚಿದೆ. ಇನ್ನು ಕೆಲವು ಹೊಟೇಲುಗಳು ತೆರೆದಿದ್ದರೂ ಮೀನು ಖರೀದಿ ಮಾಡುತ್ತಿಲ್ಲ. ಕೆಲವು ಹೊಟೇಲ್‌ಗಳಲ್ಲಿ ಒಲೆಯಲ್ಲಿ ಕಟ್ಟಿಗೆ ಉರಿಸಿ ಅಡುಗೆ ಮಾಡಲಾಗುತ್ತಿದೆ. ಇತ್ತೀಚೆಗೆ ರಾತ್ರಿ ಸುರಿದ ಮಳೆಯಿಂದಾಗಿ ಒಲೆಯಲ್ಲಿ ಅಡುಗೆ ಮಾಡುವಂತಿಲ್ಲ.
ಇದೆಲ್ಲದರ ಪರಿಣಾಮವನ್ನು ಮೀನು ಮಾರಾಟ ಮಾಡುವ ಮಹಿಳೆಯರು ನಷ್ಟ ಅನುಭವಿಸುತ್ತಿದ್ದಾರೆ.
ಅದೇ ರೀತಿ ಉಡುಪಿ ನಗರಕ್ಕೆ ಮಾತ್ರವಲ್ಲ ಶಿರ್ವ, ಕಾಪು, ಕಾರ್ಕಳ ಹಾಗೂ ಬೆಂಗಳೂರು ಸಹಿತ ಹೊರ ಜಿಲ್ಲೆ ಮತ್ತು ಕೇರಳ ಸಹಿತ ಹೊರ ರಾಜ್ಯಗಳಿಗೂ ಉಡುಪಿಯಿಂದಲೇ ಮೀನು ಸರಬರಾಜು ಆಗುತ್ತಿತ್ತು. ಅಲ್ಲಿಯೂ ಹೊಟೇಲ್ ಬಂದ್ ಆಗಿರುವುದರಿಂದ ಮೀನು ವ್ಯಾಪಾರ ಕಡಿಮೆಯಾಗಿದೆ ಎನ್ನುತ್ತಾರೆ ಮೀನುಗಾರ ವ್ಯಾಪಾರಸ್ಥರು ಆದರೆ, ಮೀನಿನ ಹೊಟೇಲುಗಳಲ್ಲಿ ಮೀನಿನ ದರ ಜಾಸ್ತಿಯಾಗಿದೆ. ಹೊಟೇಲಿನವರು ವಾಣಿಜ್ಯ ಅನಿಲವನ್ನು ಒಂದು ಸಾವಿರ ರೂ.ವರೆಗೆ ಹೆಚ್ಚು ನೀಡಿ ಖರೀದಿಸುತ್ತಿರುವುದರಿಂದ ನಷ್ಟವನ್ನು ಸರಿದೂಗಿಸಲು ಪ್ರೈಮೀನಿನ ದರವನ್ನು ಹೆಚ್ಚಳ ಮಾಡಿದ್ದಾರೆ. ಎಂದು ವರದಿಯಾಗಿದೆ.




ಮೀನಿನ ಹೊಸ – ಹಳೆ ದರ ಪ್ರತಿ ಕೆಜಿಗೆ
ಮಾಂಜಿ : ಹಳೆಯ ದರ- 1550ರೂ, ಹೊಸ ದರ- 1400ರೂ.
ಅಂಜಲ್ 1100ರೂ. 1000ರೂ, ದೊಡ್ಡ ಬಂಗುಡೆ 300 ರೂ..
260 ರೂ. ಡಿಸ್ಕೋ ಮೀನು: 180ರೂ.-140ರೂ, ರಾಣಿ ಮೀನು: 280ರೂ.-245ರೂ, ಚಿಕ್ಕ ಬಂಗುಡೆ: 210 ರೂ.- 180ರೂ
