ಗುರುವಾಯನಕೆರೆ: ಸಹಕಾರ ಭಾರತೀ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ರಾಜ್ಯದಲ್ಲಿ ಪ್ರಪ್ರಥಮವಾಗಿ ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಪದಾಧಿಕಾರಿಗಳು ಹಾಗೂ ನಿರ್ದೇಶಕ ಬಂಧುಗಳ ಅಭ್ಯಾಸ ವರ್ಗವು ಡಿಸೆಂಬರ್ 2 ಮಂಗಳವಾರ “ನಮ್ಮ ಮನೆ ಹವ್ಯಕ ಭವನ” ಗುರುವಾಯನಕೆರೆ ಇಲ್ಲಿ ಜರಗಿತು.

ಕಾರ್ಯಕ್ರಮ ಉದ್ಘಾಟಿಸಿ ಭಾರತಮಾತೆ ಹಾಗೂ ಲಕ್ಷ್ಮಣರಾವ್ ಇನಂದಾರ್ ರವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದ ಉಜಿರೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಪುಷ್ಪವತಿ ಆರ್ ಶೆಟ್ಟಿ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಭಾರತಿ ವತಿಯಿಂದ ಜಿಲ್ಲಾ ಮಹಿಳಾ ಅಭ್ಯಾಸ ವರ್ಗ ನಡೆಸಲಾಗುತ್ತಿದ್ದು ಸಹಕಾರಿ ಭಾರತಿ ಬಂಧುಗಳು ಅಭ್ಯಾಸ ವರ್ಗದಲ್ಲಿ ಸಿಗುವಂತ ಮಾಹಿತಿಯನ್ನು ಪಡೆದುಕೊಂಡು ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಸಹಕಾರ ಭಾರತಿ ಕ್ಷೇತ್ರದ ಬಲವರ್ಧನೆಗೆ ಕಾರಣವಾಗಬೇಕು ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಭಾರತಿ ಮಹಿಳಾ ಪ್ರಮುಖ ಶ್ರೀಮತಿ ಸುಭದ್ರ ಎಸ್ ರಾವ್ ಪ್ರಸ್ತಾವಿಕದೊಂದಿಗೆ ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಹಕಾರ ಭಾರತಿ ಕರ್ನಾಟಕ ರಾಜ್ಯ ಮಹಿಳಾ ಪ್ರಮುಖ ವಿದ್ಯಾ ಪೈ ಮಾತನಾಡಿ ಸಹಕಾರ ಕ್ಷೇತ್ರದ ಬೆಳವಣಿಗೆಯಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದ್ದು, ಮಹಿಳೆಯರು ಇನ್ನಷ್ಟು ಸಹಕಾರಿಗಳಾಗಿ ತನ್ನದೇ ಆದ ಕೊಡುಗೆಯನ್ನು ನೀಡಿ ದಕ್ಷಿಣ ಕನ್ನಡ ಸಹಕಾರ ಭಾರತಿಗೆ ಮತ್ತಷ್ಟು ಶಕ್ತಿ ತುಂಬಿಸುವ ಕೆಲಸ ಮಹಿಳೆಯರಿಂದ ಆಗಲಿ ಎಂದರು. ಉದ್ಘಾಟನಾ ಕಾರ್ಯಕ್ರಮದ ಅತಿಥಿಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಭಾರತಿ ಮಹಿಳಾ ಸಹ ಪ್ರಮುಖ್ ಅಮೂಲ್ಯ ಶೆಟ್ಟಿ ಕಟೀಲು ವಂದಿಸಿದರು.

Leave a Reply

Your email address will not be published. Required fields are marked *