ಬಂಟ್ವಾಳ: ಬಂಟ್ವಾಳ್ ಟೌನ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದ ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮಧ್ಯಪ್ರದೇಶ ಮೂಲದ ಆರೋಪಿಯನ್ನು ಬಂಧಿಸಿ ಸುಮಾರು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣವು ಆ.ಕ್ರಾ. 132/2025, ಕಲಂ 303(2) BNS ಅನ್ವಯ ದಾಖಲಾಗಿದ್ದು, 19-12-2025ರಂದು ಬಂಟ್ವಾಳ ತಾಲೂಕಿನ ಬಾಲ್ತಿಲ್ಲ ಗ್ರಾಮದ ಸಮುದ್ರ ಹೋಟೆಲ್ ಸಮೀಪ ನಡೆದಿದೆ.

ಹ್ಮಾವರ ಮೂಲದ ದಂಪತಿಗಳು ಶ್ರೀ ದುರ್ಗಂಬ ಬಸ್ ಸರ್ವಿಸ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವರ ಬ್ಯಾಗಿನಲ್ಲಿ ಇರಿಸಿದ್ದ ಸುಮಾರು 170ರಿಂದ 180 ಗ್ರಾಂ ತೂಕದ ಚಿನ್ನಾಭರಣ ಕಳ್ಳತನವಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮಧ್ಯಪ್ರದೇಶ ರಾಜ್ಯದ ದಾರ್ ಜಿಲ್ಲೆಯ ಧರ್ಮಪುರಿ ತಾಲೂಕಿನ ಆಜಾದ್ ಮಾರ್ಗ ವಾರ್ಡ್ ನಂ. 2 ನಿವಾಸಿ ಸಮಾದ್ ಖಾನ್ (37), ತಂದೆ ಮಹಮ್ಮದ್ ಅದಿಲ್ ಖಾನ್ ಅವರನ್ನು ಬಂಧಿಸಿದ್ದಾರೆ.
ಬಂಧಿತನಿಂದ ಸುಮಾರು 174 ಗ್ರಾಂ ತೂಕದ, ಅಂದಾಜು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *