ಪುತ್ತೂರು: ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ
ಪಾಲೆಚ್ಚಾರ್ ಎಂಬಲ್ಲಿ ಮನೆಗೆ ನುಗ್ಗಿದ ಕಳ್ಳರು
ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದು, ಈ
ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿವಂಗತ ಆನಂದ
ನಾಯ್ಕ ಅವರ ಪತ್ನಿ ಉಮಾವತಿ ಅವರು ದೂರು ನೀಡಿದ್ದಾರೆ.

ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕುದ್ದುಪದವು
ಎಂಬಲ್ಲಿ ಅಂಗನವಾಡಿ ಸಹಾಯಕಿಯಾಗಿ ಕೆಲಸ
ಮಾಡುತ್ತಿರುವ ಉಮಾವತಿಯವರು ಅಲ್ಲೇ ಬಾಡಿಗೆ
ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಅವರ ಪತಿ
ನಿಧನರಾದ ನಂತರ, ಅವರು ಕೆಲ ಸಮಯ ತಾಯಿ
ಮನೆಯಲ್ಲಿ ವಾಸವಾಗಿದ್ದರು. ಅಕ್ಟೋಬರ್ 22 ರಂದು
ಪಾಲೆಚ್ಚಾರುವಿನಲ್ಲಿರುವ ತಮ್ಮ ಮನೆಗೆ ಬಂದು
ಹೋಗಿದ್ದ ಉಮಾವತಿ ಅವರು, ನವೆಂಬರ್ 5 ರಂದು
ಮತ್ತೆ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ
ಬಂದಿದೆ.


ಮನೆಯ ಎದುರಿನ ಬಾಗಿಲಿನ ಬೀಗ ಒಡೆದು ಕಳ್ಳರು
ಒಳನುಗ್ನ್ಗಿದ್ದು, ಮನೆಯ ಸಾಮಾನುಗಳು
ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕಪಾಟಿನ ಬೀಗ ತೆರೆದಿದ್ದು,
ಅದರೊಳಗಿನ ಲಾಕರ್‌ನಲ್ಲಿ ಇಟ್ಟಿದ್ದ 8 ಗ್ರಾಂ ತೂಕದ
ಎರಡು ಚಿನ್ನದ ಕಿವಿಯೋಲೆಗಳು, 10 ಗ್ರಾಂ ತೂಕದ
ಒಂದು ಬೆಳ್ಳಿಯ ಸರ, 20 ಗ್ರಾಂ ತೂಕದ ಎರಡು
ಬೆಳ್ಳಿಯ ಕಾಲುಂಗುರಗಳು ಮತ್ತು 1,000 ರೂಪಾಯಿ
ನಗದು ಕಾಣೆಯಾಗಿದೆ. ಕಳವಾದ ಸೊತ್ತುಗಳ ಒಟ್ಟು
ಮೌಲ್ಯ 03,300 ರೂಪಾಯಿ ಎಂದು ಅಂದಾಜಿಸಲಾಗಿದೆ
ಎಂದು ಉಮಾವತಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ
ನಡೆಸುತ್ತಿದ್ದಾರೆ.
