ಬೆಂಗಳೂರು: ತಿರುಪತಿ–ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವೆ ವಿ. ಸೋಮಣ್ಣ ಹೊಸ ನಿರ್ಣಯ ಹೊರಡಿಸಿದ್ದಾರೆ. ಕರ್ನಾಟಕದ ಮೂಲಕ ಹೊಸ ರೈಲು ಸಂಚಾರಕ್ಕೆ ಅನುಮತಿ ದೊರೆತಿದ್ದು, ಇದು ಬೀದರ ಮತ್ತು ಬಳ್ಳಾರಿ ಸೇರಿ ನಾಲ್ಕು ರಾಜ್ಯಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಡಿಸೆಂಬರ್ 9ರಿಂದ ಹೊಸ ಮಾರ್ಗದಲ್ಲಿ ರೈಲು ಸಂಚಾರ ಪ್ರಾರಂಭವಾಗಲಿದ್ದು, ಡಿಸೆಂಬರ್ 14ರಿಂದ ಅಧಿಕೃತವಾಗಿ ಪೂರ್ಣ ಪ್ರಮಾಣದಲ್ಲಿ ಸೇವೆ ಆರಂಭವಾಗಲಿದೆ.




ಇದೇ ಕುರಿತು ತಿಳಿಸಿರುವ ವಿ. ಸೋಮಣ್ಣ, “ಕರ್ನಾಟಕದ ಮೂಲಕ ರೈಲು ಸಂಚಾರ ಆರಂಭವಾಗುವುದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಸಿಗಲಿದೆ” ಎಂದು ತಿಳಿಸಿದ್ದಾರೆ.



