ಬೆಂಗಳೂರು: ಇಂಡಿಗೋ ವಿಮಾನಗಳ ಹಾರಾಟದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತಿದ್ದು, ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇವಲ 58 ವಿಮಾನಗಳು ಮಾತ್ರ ರದ್ದಾಗಿವೆ. ನಿನ್ನೆ 120ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದ ಹಿನ್ನೆಲೆಯಲ್ಲಿ ಇಂದು ರದ್ದಾದ ವಿಮಾನಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ಕಳೆದ ಒಂದು ವಾರದಿಂದ ಇಂಡಿಗೋ ವಿಮಾನ ಹಾರಾಟದಲ್ಲಿ ಭಾರಿ ವ್ಯತ್ಯಯ ಉಂಟಾಗಿ, ದೇಶಾದ್ಯಂತ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಪರದಾಡುವಂತಾಗಿತ್ತು. ತಾಂತ್ರಿಕ ತೊಂದರೆ ಹಾಗೂ ಸಿಬ್ಬಂದಿ ಸಮಸ್ಯೆಗಳ ಹಿನ್ನೆಲೆಯಲ್ಲಿ ವಿಮಾನಗಳ ಬಹುಪಾಲು ರದ್ದುಪಡೆಯುತ್ತಿತ್ತು.

ವಿಮಾನ ಸಂಚಾರ ಭಾಗಶಃ ಸುಧಾರಣೆ ಕಂಡಿದ್ದು, ಇಂಡಿಗೋ ವಿಮಾನಗಳ ಹಾರಾಟ ಕ್ರಮೇಣ ಸಹಜ ಸ್ಥಿತಿಯತ್ತ ಸಾಗುತ್ತಿದೆ. ಪ್ರಯಾಣಿಕರು ಈಗ ಕೊಂಚ ನಿರಾಳತೆ ಅನುಭವಿಸುತ್ತಿದ್ದಾರೆ.

ಕೆಎಐಎಲ್ ಅಧಿಕಾರಿಗಳ ಪ್ರಕಾರ, ಮುಂದಿನ ಒಂದು ಎರಡು ದಿನಗಳಲ್ಲಿ ಇಂಡಿಗೋ ವಿಮಾನ ಸಂಚಾರ ಸಂಪೂರ್ಣ ಸರಳಗೊಳ್ಳುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *