ಬಿಲ್ಲವ ಸಂದೇಶ್ ಎಂಬ ವ್ಯಕ್ತಿಯೊಬ್ಬ ಫೇಸ್ಬುಕ್ ನಲ್ಲಿ ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯ ರ ಭಾವಚಿತ್ರ ಹಾಕಿ ಶ್ರದ್ಧಾಂಜಲಿ ಎಂದಿರುವುದನ್ನು ಮಾಡಿರುವುದನ್ನು ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಂಘದ ಉಪಾಧ್ಯಕ್ಷರಾದ ಶ್ರೀನಿವಾಸ್ ಕಾರ್ಲ ಖಂಡಿಸಿದ್ದಾರೆ.
ದಲಿತ ಸಮುದಾಯದ ಅದರಲ್ಲು ಯಾವುದೆ ರಾಜಕಾರಣದ ಹಿನ್ನಲೆ ಇಲ್ಲದೆ ಅತ್ಯಂತ ಕಡು ಕುಟುಂಬದಲ್ಲಿ ಹುಟ್ಟಿ ಯಾವುದೆ ಹಗರಣ ಮಾಡದೆ ತಾವಾಯ್ತು ತಮ್ಮ ಕೆಲಸವಾಯ್ತು ಅಂತ ಇರುವ ಸುಳ್ಯದ ಬಿಜೆಪಿಯ ದಲಿತ ಕುಟುಂಬದಿಂದ ಬಂದ ಶಾಸಕಿ ಭಾಗಿರತಿ ಮುರುಳ್ಯರವರನ್ನು ಜೀವಂತ ಇರುವಾಗಲೆ ಅವರು ಸತ್ತುಹೋಗಿದ್ದಾರೆ ಅಂತ ಟ್ರೋಲ್ ಮಾಡಿ ಶ್ರದ್ಧಾಂಜಲಿ ಸಲಿಸಿರುವುದು ಆತನ ವಿಕೃತ ಮನಸ್ಸಿನ ಪರಮಾವಧಿ ಎಂದು ಅವರು ಹೇಳಿದ್ದಾರೆ.





ದಲಿತ ಸಮುದಾಯಕ್ಕೆ ಸೇರಿದವರು ಹಾಗೂ ಮಹಿಳೆ ಎಂಬ ಕಾರಣಕ್ಕೆ ಈ ರೀತಿ ಅವರ ಬಗ್ಗೆ ಬರೆದು ಹಾಕುವುದು ಖಂಡನೀಯ.
ಇಂತಹ ವ್ಯಕ್ತಿಗಳಿಂದ ಸಮಾಜದ ಶಾಂತಿ ಕದಡುತ್ತದೆ.
ಅವನು ಯಾರೇ ಆಗಿರಲಿ.. ಒಂದು ಹೆಣ್ಣಿಗೆ ಮಾಡಿದ ಅವಮಾನ.
ಶ್ರೀಮತಿ ಬಾಗೀರಥಿ ಅವರು ತಾಯಿಗೆ ಸಮಾನ.. ಅವರನ್ನು ಅವಮಾನ ಮಾಡುವುದು ಅಕ್ಸಮ್ಯ ಅಪರಾಧ….
ಇಂತಹ ಕೃತವನ್ನು ಆದಿ ದ್ರಾವಿಡ ಸಮುದಾಯ ತೀವ್ರವಾಗಿ ಇದನ್ನು ಖಂಡಿಸುತ್ತದೆ
ಅವನು ಯಾರೇ ಆಗಿರಲಿ.. ತಕ್ಷಣ ಅವನ ಮೇಲೆ
ಕೇಸು ದಾಖಲಿಸಿ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಿ ಎಂದು ಅವರು ಆಗ್ರಹಿಸಿದ್ದಾರೆ




