ಪುತ್ತೂರು:
ಸ್ಪರ್ಧಾತ್ಮಕ ಪರೀಕ್ಷೆಗಳ ಕ್ಷೇತ್ರದಲ್ಲಿ ಹೆಸರು ಪಡೆದಿರುವ ವಿದ್ಯಾಮಾತಾ ಅಕಾಡೆಮಿಯು ಸದ್ಯದಲ್ಲೇ ನಡೆಯಲಿರುವ ಶಿಕ್ಷಕರ ನೇಮಕಾತಿ ಪರೀಕ್ಷೆಗಳಾದ GPSTR, HSTR ಹಾಗೂ PSTR ಗಳ ಪೂರ್ವ ತಯಾರಿ ತರಬೇತಿಗಳನ್ನು ಪ್ರಾರಂಭಿಸಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ದಾಖಲಾತಿ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ.

ಎರಡು ತಿಂಗಳ ಅವಧಿಯಲ್ಲಿ ನಡೆಯುವ ಈ ತರಬೇತಿಗಳು ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯಲಿದ್ದು, ಪ್ರತಿದಿನ ರಾತ್ರಿ 7ರಿಂದ 9ರ ವರೆಗೆ ಲೈವ್ ತರಗತಿಗಳನ್ನು ಆಯೋಜಿಸಲಾಗುತ್ತದೆ. ಪಠ್ಯಕ್ರಮ ಹಾಗೂ ಪ್ರತ್ಯೇಕ ಪ್ರಶ್ನೆ ಪತ್ರಿಕೆಗಳಿಗೆ ಅನುಗುಣವಾಗಿ ತರಬೇತಿ ನೀಡಲಾಗುತ್ತಿದ್ದು, ದಿನನಿತ್ಯ ಮಾಕ್ ಟೆಸ್ಟ್‌ಗಳು ಹಾಗೂ ಕಾರ್ಯಾಗಾರಗಳನ್ನೂ ಒಳಗೊಂಡಂತೆ ಸಮಗ್ರ ತಯಾರಿಯನ್ನು ಒದಗಿಸಲಾಗುತ್ತದೆ.
ವಿದ್ಯಾಮಾತಾ ಅಕಾಡೆಮಿಯು KARTET, KSET, NET, CTET ಸೇರಿದಂತೆ ಹಲವು ಶಿಕ್ಷಕರ ಹಾಗೂ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗಳಿಗೆ ಯಶಸ್ವೀ ತರಬೇತಿಯನ್ನು ನೀಡಿದ ದಾಖಲೆ ಹೊಂದಿದ್ದು, 2022ರಲ್ಲಿ ನಡೆದ GPSTR ನೇಮಕಾತಿಯಲ್ಲಿ ಐದು ಅಭ್ಯರ್ಥಿಗಳು ಆಯ್ಕೆಯಾಗುವಲ್ಲಿ ಮಹತ್ವದ ಪಾತ್ರ ವಹಿಸಿತ್ತು.

ಲಭ್ಯ ಮಾಹಿತಿಯ ಪ್ರಕಾರ GPSTR ಹಾಗೂ PSTR ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು D.Ed / B.Ed ಜೊತೆಗೆ KARTET ಅರ್ಹತೆಯನ್ನು ಹೊಂದಿರಬೇಕು. HSTR ನೇಮಕಾತಿಗೆ ಅರ್ಜಿ ಸಲ್ಲಿಸುವವರು B.Ed ವಿದ್ಯಾರ್ಹತೆ ಹೊಂದಿರಬೇಕು (KARTET ಕಡ್ಡಾಯವಲ್ಲ) ಎಂದು ತಿಳಿಸಲಾಗಿದೆ.
ವಿದ್ಯಾಮಾತಾ ಅಕಾಡೆಮಿಯಲ್ಲಿ ನಡೆಯುವ ಈ ಪೂರ್ವ ತಯಾರಿ ತರಬೇತಿಯ ಸದುಪಯೋಗ ಪಡೆದುಕೊಳ್ಳಲು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 9620468869 ಸಂಖ್ಯೆಯನ್ನು ಸಂಪರ್ಕಿಸಿ ದಾಖಲಾತಿ ಪಡೆಯಬಹುದು ಎಂದು ಸಂಸ್ಥೆ ತಿಳಿಸಿದೆ.

Leave a Reply

Your email address will not be published. Required fields are marked *