ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ (ರಿ.), ಗುತ್ತಿಗಾರು ಇದರ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ಗುತ್ತಿಗಾರಿನ ಪ. ವರ್ಗದ ಸಭಾಭವನದಲ್ಲಿ ಕ್ಲಬ್‌ನ ಸ್ಥಾಪಕಾಧ್ಯಕ್ಷ ಮಾಯಿಲಪ್ಪ ಕೊಂಬೆಟ್ಟು ಅವರ ಸಮ್ಮುಖದಲ್ಲಿ ನಡೆಯಿತು.

ಸಭೆಯಲ್ಲಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಮೋಹನ್ ದಾಸ್ ಶಿರಾಜೆ ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ನಿರಂತ್ ದೇವಶ್ಯ, ಕೋಶಾಧಿಕಾರಿಯಾಗಿ ವಿನೀತ್ ಮುತ್ಲಾಜೆ ಅವರನ್ನು ನೇಮಕ ಮಾಡಲಾಯಿತು.

ನಿರಂತ್ ದೇವಶ್ಯ

Vineeth Muthlaje

ಮೋಹನ್ ಶಿರಾಜೆ

ಇದೇ ಸಂದರ್ಭದಲ್ಲಿ ನಿರ್ದೇಶಕರಾಗಿ ಗಿರೀಶ್ ಪಾರೆಪ್ಪಾಡಿ, ಜಯಂತ ದೇವ, ನವೀನ್ ಕೊಪ್ಪಡ್ಕ, ಭರತ್ ಹುಲಿಕೆರೆ, ಚಂದ್ರಶೇಖರ ಕಡೋಡಿ, ಶಿವಪ್ರಸಾದ್ ಚಣಿಲ, ಸುನಿಲ್ ಸಂಪ್ಯಾಡಿ, ಕುಲದೀಪ್ ಪೈಕ ಹಾಗೂ ಅನಿಲ್ ಮೆಟ್ಟಿನಡ್ಕ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು ಹಾಗೂ ಮುಂದಿನ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ಮತ್ತಷ್ಟು ಉತ್ತೇಜಿಸುವ ಬಗ್ಗೆ ಚರ್ಚಿಸಲಾಯಿತು.

Leave a Reply

Your email address will not be published. Required fields are marked *