ಬಿಹಾರದಲ್ಲಿ 243 ಕ್ಷೇತ್ರಗಳಿಗೆ ನಡೆದಿರುವ ವಿಧಾನಸಭಾ ಚುನಾವಣೆಯ ಪ್ರಾಥಮಿಕ ಮತ ಎಣಿಕೆಯಲ್ಲೇ ಎನ್ಡಿಎ ಸ್ಪಷ್ಟ ಮುನ್ನಡೆ ಸಾಧಿಸಿದೆ.
ಒಟ್ಟು 243 ಕ್ಷೇತ್ರಗಳಲ್ಲಿ ಎನ್ಡಿಎ 154 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದು, ಮಹಾಘಟ್ ಬಂಧನ್ 87 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

20 ವರ್ಷಗಳಿಂದ ಸಿಎಂ ಆಗಿ ಆಡಳಿತ ನಡೆಸಿರುವ ನಿತೀಶ್ ಕುಮಾರ್ ಅವರು ಈ ಬಾರಿಯೂ ಸಿಎಂ ಆಗುವ ಸಾಧ್ಯತೆಗಳು ಮತ್ತಷ್ಟು ಗಟ್ಟಿಯಾಗುತ್ತಿರುವಂತಿದೆ.

ಪಕ್ಷವಾರು ಮುನ್ನಡೆ ವಿವರಗಳು —
ಜೇಡಿಯು (JDU): 71 ಕ್ಷೇತ್ರಗಳಲ್ಲಿ ಮುನ್ನಡೆ
ಬಿಜೆಪಿ (BJP): 61 ಕ್ಷೇತ್ರಗಳಲ್ಲಿ ಮುನ್ನಡೆ
ಆರ್ಜೆಡಿ (RJD): 64 ಕ್ಷೇತ್ರಗಳಲ್ಲಿ ಮುನ್ನಡೆ
ಕಾಂಗ್ರೆಸ್ (INC): 19 ಕ್ಷೇತ್ರಗಳಲ್ಲಿ ಮುನ್ನಡೆ

ಒಟ್ಟಾರೆ, ಪ್ರಾಥಮಿಕ ಫಲಿತಾಂಶಗಳು ಎನ್ಡಿಎ ಸರ್ಕಾರ ರಚನೆಗೆ ಅನುಕೂಲಕರವಾಗಿದ್ದು, ನಿತೀಶ್ ಕುಮಾರ್ ಅವರ ಸಿಎಂ ಪೀಠ ಮರುಸ್ಥಾಪನೆಗೆ ದಾರಿ ತೆರೆದಿವೆ.
ಹೆಚ್ಚಿನ ತಾಜಾ ಅಪ್ಡೇಟ್ಗಳು ನಂತರ…

