ಕಡಬ: ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರಗೀತೆಯಾದ ‘ವಂದೇ ಮಾತರಂ’ ಗೀತೆಯ 150 ವರ್ಷಗಳ ಪೂರ್ತಿಯ ಅಂಗವಾಗಿ ಕಡಬ ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಮತ್ತು ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಜನವರಿ 12ರಂದು ಕೇವಳದ ಯಾದವಶ್ರೀ ಸಭಾಂಗಣದಲ್ಲಿ ಸಾಮೂಹಿಕ ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಶ್ರೀ ಸದಾಶಿವ ಭಟ್ ವಹಿಸಿ, “ವಿವೇಕಾನಂದರ ಜೀವನಾದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಸಂದೇಶ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಬಿಜೆಪಿ ಜಿಲ್ಲಾ ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಹಾಗೂ ಮಾಣಿಪ್ಪಾಡಿ ಕನ್‌ಸ್ಟ್ರಕ್ಷನ್ ಕಡಬದ ಸಂಸ್ಥಾಪಕ ಶ್ರೀ ಕೃಷ್ಣ ಎಂ.ಆರ್. ಮಾತನಾಡಿ, “ದೇಶವನ್ನು ಪರಮ ವೈಭವದತ್ತ ಕೊಂಡೊಯ್ಯುವಲ್ಲಿ ಯುವಜನಾಂಗದ ಪಾತ್ರ ಅತ್ಯಂತ ಮಹತ್ವದ್ದು. ಭಾರತದಲ್ಲಿ ಸಹೋದರತ್ವ ಮತ್ತು ಮೌಲ್ಯಗಳು ಆಳವಾಗಿ ನೆಲೆಸಿವೆ. ಹಿಂದೂ ಧರ್ಮ ಕೇವಲ ಧರ್ಮವಲ್ಲ, ಜಗತ್ತಿಗೆ ಮಾರ್ಗದರ್ಶನ ನೀಡುವ ಸಿದ್ಧಾಂತವಾಗಿದೆ” ಎಂದು ಹೇಳಿದರು. ವಿದ್ಯಾರ್ಥಿಗಳು ದೇಶಭಕ್ತಿಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ವಿಶ್ವ ಹಿಂದೂ ಪರಿಷತ್ ಕಡಬದ ಗೌರವಾಧ್ಯಕ್ಷ ಶ್ರೀ ವಾಸುದೇವ ಭಟ್ ಕಡ್ಯ ದೀಪ ಪ್ರಜ್ವಲನೆ ಮಾಡಿ, ವಿವೇಕಾನಂದರ ಕುರಿತ ಹಾಡನ್ನು ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಶ್ರೀ ಸುಜಿತ್ ಕುಂಡಡ್ಕ (ಜಿಲ್ಲಾ ಸಹಕಾರ್ಯವಾಹ, ಆರ್‌ಎಸ್‌ಎಸ್), ಶ್ರೀ ರಾಧಾಕೃಷ್ಣ ಕೋಲ್ಪೆ (ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಧರ್ಮಪ್ರಸಾರ ಪ್ರಮುಖ್), ಶ್ರೀಮತಿ ಸವಿತಾ ಶಿವಸುಬ್ರಮಣ್ಯ ಭಟ್ (ಸಂಚಾಲಕರು, ಸರಸ್ವತೀ ವಿದ್ಯಾಲಯ), ಶ್ರೀ ಅಜಿತ್ ರೈ ಆರ್ತಿಲ (ಸಂಚಾಲಕರು, ಸರಸ್ವತೀ ಆಂಗ್ಲ ಮಾಧ್ಯಮ ಶಾಲೆ), ಶ್ರೀಮತಿ ಶೈಲಶ್ರೀ ಆರ್.ಎಸ್. (ಮುಖ್ಯಗುರು, ಪ್ರೌಢಶಾಲೆ) ಹಾಗೂ ಶ್ರೀ ವಸಂತ ಕೆ. (ಮುಖ್ಯಗುರು, ಆಂಗ್ಲ ಮಾಧ್ಯಮ ಶಾಲೆ) ಉಪಸ್ಥಿತರಿದ್ದರು.
ಪುಟಾಣಿಗಳು ವಿವೇಕಾನಂದರ ವೇಷಭೂಷಣ ತೊಟ್ಟು ಕಾರ್ಯಕ್ರಮಕ್ಕೆ ವಿಶಿಷ್ಟ ಮೆರುಗು ನೀಡಿದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳ ಸಾಮೂಹಿಕ ಗಾಯನ ನೆರವೇರಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಸೀತಾರಾಮ ಗೌಡ ಎ. ಹಾಗೂ ಶ್ರೀ ರಾಮಣ್ಣ ಜಾಲ್ತಾರ್ ಉಪಸ್ಥಿತರಿದ್ದರು.
ನಿಹಾರಿಕಾ ಸ್ವಾಗತಿಸಿ, ಯಕ್ಷಿತ್ ವಂದನೆಯನ್ನು ಸಲ್ಲಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಶ್ರೀಮತಿ ಸೌಮ್ಯ ಕೆ.ಎ. ಹಾಗೂ ಕುಮಾರಿ ಶ್ವೇತಾ ಪಿ.ಕೆ. ನಡೆಸಿಕೊಟ್ಟರು.

Leave a Reply

Your email address will not be published. Required fields are marked *