ಬೆಳಗಾವಿ: ರಾಜ್ಯದಲ್ಲಿ ಮತ್ತೊಂದು ಘೋರ ದುರಂತವೊಂದು ಸಂಭವಿಸಿದ್ದು, ಚಳಿಗೆ ಬೆಂಕಿ ಹಾಕಿ ನಿದ್ದೆ ಮಾಡುವಾಗ ಉಸಿರುಗಟ್ಟಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಬೆಳಗಾವಿಯ ಅಮನ್ ನಗರದಲ್ಲಿ ಈ ದಾರುಣ ಘಟನೆ ನಡೆದಿದ್ದು, ನಾಲ್ವರು ಯುವಕರು ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ತಮ್ಮ ರೂಮಿಗೆ ಮಲಗಲು ಬಂದಿದ್ದರು.

ಈ ವೇಳೆ ಭಾರಿ ಚಳಿ ಇರುವ ಕಾರಣ ರೂಮಿನ ಬಾಗಿಲು, ಕಿಟಕಿಗಳನ್ನೆಲ್ಲ ಮುಚ್ಚಿಕೊಂಡು ಬೆಂಕಿ ಹಾಕಿಕೊಂಡಿದ್ದರು. ಬಳಿಕ ರೂಮಿನ ತುಂಬ ಹೊಗೆ ತುಂಬಿಉಸಿರುಗಟ್ಟಿ ಮೂವರು ಯುವಕರು ಮೃತಪಟ್ಟಿದ್ದಾರೆ.

ಮೃತರನ್ನ ರಿಹಾನ್ ಮತ್ತೆ( 22), ಮೋಹಿನ್ ನಾಲಬಂದ(23), ಸರ್ಫರಾಜ್ ಹರಪ್ಪನಹಳ್ಳಿ,(22) ಎಂದು ಗುರುತಿಸಲಾಗಿದೆ. ಮತ್ತೋರ್ವ ಯುವಕ ಶಾಹನಾವಾಜ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರು ಬೆಳಗಾವಿ ನಗರದ ನಿವಾಸಿಗಳು ಆಗಿದ್ದಾರೆ. ಘಟನೆ ಸಂಬಂಧ ಪ್ರಕಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *