ಬಂಟ್ವಾಳ :ದಿನಾಂಕ 22.11.2025 ರಂದು ರಾತ್ರಿ ಬಂಟ್ವಾಳ ಭಂಡಾರಿಬೆಟ್ಟು ಎಂಬಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿ ಹಾಗೂ ಕರ್ಕಶವಾಗಿ ಸಾರ್ವಜನಿಕ ಶಾಂತಿ ನೆಮ್ಮದಿಗೆ ತೊಂದರೆಯಾಗುವಂತೆ ಧ್ವನಿವರ್ಧಕ ಬಳಸುತ್ತಿರುವ ಬಗ್ಗೆ ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ಬಂದ ಮೇರೆಗೆ,ಸದ್ರಿ ಸ್ಥಳಕ್ಕೆ ತೆರಳಿ ನೋಡಲಾಗಿ ಮದುವೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಯಾವುದೇ ಪೂರ್ವಾನುಮತಿ ಪಡೆಯದೆ,ಕರ್ಕಶವಾಗಿ ಡಿ.ಜೆ ಧ್ವನಿವರ್ಧಕ ಬಳಸುತ್ತಿದ್ದದ್ದು ಕಂಡುಬಂದಿರುತ್ತದೆ.ಈ ಬಗ್ಗೆ ಅಕ್ರಮ ನಂ :135/2025,ಕಲಂ :36,37,109 ಕೆ ಪಿ ಆಕ್ಟ್ ಮತ್ತು ಕಲಂ :5,6 ಧ್ವನಿ ಮಾಲಿನ್ಯ ನಿಯಂತ್ರಣ ಕಾಯ್ದೆ 2000 ರಂತೆ ಪ್ರಕರಣ ದಾಖಲಾಗಿರುತ್ತದೆ.







