ಕಾಪು ತಹಸೀಲ್ದಾರ್ ಅವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಾಪು ವಲಯ ದ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿ ಯಾಗಿ ಮಾತಾಡು ತ್ತ ಸಾರ್ವಜನಿಕ ರ ಕೆಲಸ ಮಾಡು ವ ಸರ್ಕಾರಿ ನೌಕರರು ದೇವ ರ ಸೇವೆ ಎಂದು ಕೆಲಸ ಮಾಡ ಬೇಕಾಗುತ್ತದೆ ಕೆಲಸ ಒತ್ತಡದ ಮದ್ಯೆ ಎಲ್ಲ ವನ್ನು ತಾಳ್ಮೆಯಿಂದ ಸಹಿಸಿಕೊಂಡು ನಾವೆಲ್ಲ ಸೇವೆ ನೀಡ ಬೇಕಾಗುತ್ತದೆ ಸರಕಾರಿ ನೌಕರರ ಸಂಘ ದ ಸ್ವಂತ ಕಟ್ಟಡ ಮತ್ತು ಸ್ವಂತ ಜಾಗ ಪಡ ಕೊಳ್ಳುವಲ್ಲಿ ತನ್ನ ಸಂಪೂರ್ಣ ಸಹಕಾರ ಇದೆ ಎಂದರು.

ರಾಜ್ಯ ನೌಕರರ ಸಂಘ ಬೆಂಗಳೂರು, ಇವರು ನೀಡಿದ ಕ್ಯಾಲೆಂಡರ್ ಅನ್ನು ಮಾನ್ಯ ತಹಶೀಲ್ದಾರರು ಕಾಪು ತಾಲೂಕು ಇವರು ಬಿಡುಗಡೆಗೊಳಿಸಿ ಸರ್ಕಾರಿ ನೌಕರರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ತಾಲೂಕು ನೌಕರರ ಸಂಘದ ಅಧ್ಯಕ್ಷರಾದ ಬಸವರಾಜ್, ಗೌರವ ಅಧ್ಯಕ್ಷರಾದಅನಂತ ಪದ್ಮನಾಭ ನಾಯಕ್, ಕಾರ್ಯದರ್ಶಿಯವರಾದ ಶ್ರೀಮತಿ ಶಕುಂತಲಾ, ನೌಕರ ಸಂಘದ ಖಜಾಂಜಿ ಶ್ರೀ ಸತೀಶ್ ಹೋಬಳಿದಾರ್,ಕಾಪು ತಾಲೂಕು ಸರ್ಕಾರಿ ನೌಕರ ಸಂಘದ ನಿರ್ದೇಶಕರಾದ ಶ್ರೀ ಅಶೋಕ್ ಕೋಟೆಕಾರ್, ಸರ್ಕಾರಿ ನೌಕರರ ಸಂಘದ ನಿರ್ದೇಶಕರು, ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಉಪಸ್ಥಿತರಿದ್ದರು.
ನಂತರ ತಾಲೂಕು ಕಚೇರಿ ಕಾಪು, ಕಾಪು ಪುರಸಭೆ, ತಾಲೂಕು ಪಂಚಾಯತ್ ಕಾಪು ಹಾಗೂ ಇತರ ಇಲಾಖೆ ಗಳಿಗೆ ಕ್ಯಾಲೆಂಡರ್ ವಿತರಣೆ ಮಾಡಲಾಯಿತು.

Leave a Reply

Your email address will not be published. Required fields are marked *