ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಕಟೀಲು ಇವರಿಂದ 30ನೇ ವರ್ಷದ ಯಕ್ಷಗಾನ ಕಥಾ ಭಾಗ “ಶ್ರೀ ದೇವಿ ಮಹಾತ್ಮೆ” ಯನ್ನು ಬಯಲಾಟ ರೂಪದಲ್ಲಿ ಪ್ರದರ್ಶಿಸಲಾಗುವುದು.





ಈ ಯಕ್ಷಗಾನ ಬಯಲಾಟವು ಜನವರಿ 22, 2026 (ಗುರುವಾರ) ಸಂಜೆ ಗಂಟೆ 6:00ಕ್ಕೆ ಕಟೀಲು ಸಮೀಪದ ತಿಪ್ಪಕೋಡಿ ಮನೆ ಅಂಗಳದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಶ್ರೀಮತಿ ಮತ್ತು ಶ್ರೀ ಬಾಲಕೃಷ್ಣ ಮಹಾಬಲ ರೈ, ತಿಪ್ಪಕೋಡಿ ಅವರು ಪ್ರಸಾದವನ್ನು ಸ್ವೀಕರಿಸಬೇಕಾಗಿ ಅಪೇಕ್ಷಿಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ರಾತ್ರಿ 8:00 ಗಂಟೆಯ ನಂತರ ಅನ್ನಸಂತರ್ಪಣೆ ನಡೆಯಲಿದ್ದು, ನಂತರ ಶ್ರೀ ದುರ್ಗಾ ಮಹಾಲಕ್ಷ್ಮಿ ಭಜನಾ ಮಂಡಳಿ, ಶ್ರೀ ಧಾಮ ಮಾಣಿಲ ಇವರಿಂದ ಭಜನಾ ಕಾರ್ಯಕ್ರಮ ಜರುಗಲಿದೆ.


ಯಕ್ಷಗಾನ ಅಭಿಮಾನಿಗಳು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಆಯೋಜಕರು ವಿನಂತಿಸಿದ್ದಾರೆ.


