ವಾಷಿಂಗ್ಟನ್‌: ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕ ಮತ್ತು ಇರಾನ್‌ ನಡುವೆ 2 ವಾರಗಳ ಕದನ ವಿರಾಮ ಘೋಷಣೆಯಾಗಿದೆ.

ಇರಾನ್‌ಗೆ ನೀಡಿದ್ದ 48 ಗಂಟೆಗಳ ಡೆಡ್‌ಲೈನ್‌ ಅಮೆರಿಕ ಕಾಲಮಾನ ರಾತ್ರಿ 8 ಗಂಟೆಗೆ ಅಂತ್ಯವಾಗುವ ಒಂದು ಗಂಟೆಯ ಮೊದಲು ಟ್ರಂಪ್‌ ತಮ್ಮ ಟ್ರೂಥ್‌ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಇರಾನ್‌ ಒಪ್ಪಿಕೊಂಡಿದೆ ಮತ್ತು ಅವರ ಕಡೆಯಿಂದ 10 ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ಟ್ರಂಪ್‌ ಪೋಸ್ಟ್‌ನಲ್ಲಿ ಏನಿದೆ?
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಇಂದು ರಾತ್ರಿ ಇರಾನ್‌ಗೆ ಕಳುಹಿಸಲಾಗುತ್ತಿರುವ ವಿನಾಶಕಾರಿ ಪಡೆಗಳನ್ನು ತಡೆಹಿಡಿಯುವಂತೆ ಮನವಿ ಮಾಡಿದರು.

ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಈ ಕೂಡಲೇ ತೆರೆಯಲು ಒಪ್ಪಿಕೊಂಡರೆ ಇರಾನ್‌ ಮೇಲೆ ಮಾಡಲು ಉದ್ದೇಶಿಸಿರುವ ಬಾಂಬ್‌ ದಾಳಿಯನ್ನು ಎರಡು ವಾರಗಳ ಕಾಲ ತಡೆ ಹಿಡಿಯಲು ಒಪ್ಪಿಗೆ ನೀಡುತ್ತೇನೆ. ಇದು ದ್ವಿಪಕ್ಷೀಯ ಕದನ ವಿರಾಮ ಆಗಲಿದೆ.ಈಗಾಗಲೇ ನಾವು ಎಲ್ಲಾ ಮಿಲಿಟರಿ ಉದ್ದೇಶಗಳನ್ನು ಪೂರೈಸಿದ್ದೇವೆ ಮತ್ತು ಮೀರಿದ್ದೇವೆ. ಇರಾನ್‌ನೊಂದಿಗೆ ದೀರ್ಘಾವಧಿಯ ಶಾಂತಿ ಮತ್ತು ಮಧ್ಯಪ್ರಾಚ್ಯದಲ್ಲಿ ಶಾಂತಿಗೆ ಸಂಬಂಧಿಸಿದ ನಿರ್ಣಾಯಕ ಒಪ್ಪಂದದೊಂದಿಗೆ ಬಹಳ ದೂರದಲ್ಲಿದ್ದೇವು.ಇರಾನ್‌ ಕಡೆಯಿಂದ 10 ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದ್ದು, ಇದು ಶಾಶ್ವತ ಶಾಂತಿ ಮಾತುಕತೆಗೆ ಉತ್ತಮ ಆಧಾರವಾಗಿದೆ. ಈ ಎರಡು ವಾರಗಳ ಸಮಯವು ಇರಾನ್ ಮತ್ತು ಅಮೆರಿಕದ ನಡುವೆ ದೀರ್ಘಕಾಲದ ಶಾಂತಿ ಒಪ್ಪಂದವನ್ನು ಅಂತಿಮಗೊಳಿಸಲು ಮತ್ತು ಪೂರ್ಣಗೊಳಿಸಲು ಸಹಕಾರಿಯಾಗಲಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಪರವಾಗಿ, ಅಧ್ಯಕ್ಷರಾಗಿ, ಮತ್ತು ಮಧ್ಯಪ್ರಾಚ್ಯ ದೇಶಗಳನ್ನು ಪ್ರತಿನಿಧಿಸುತ್ತಾ, ಈ ದೀರ್ಘಕಾಲೀನ ಸಮಸ್ಯೆ ಪರಿಹಾರದ ಹಂತಕ್ಕೆ ಬಂದಿರುವುದು ಗೌರವದ ಸಂಗತಿ ಎಂದು ಟ್ರಂಪ್‌ ಹೇಳಿದ್ದಾರೆ.

Leave a Reply

Your email address will not be published. Required fields are marked *