Month: November 2025

ದೇವರ ನಾಡು ಶ್ರೀಕೃಷ್ಣ ನ ಸನ್ನಿದಿ ಉಡುಪಿಗೆ ನವೆಂಬರ್ 28ರಂದು ಪ್ರಧಾನಿ ಮೋದಿ ಭೇಟಿ-PRIME TV

ಉಡುಪಿ: ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ನ.28ರಂದು ಉಡುಪಿ ಶ್ರೀಕೃಷ್ಣಮಠಕ್ಕೆ ಆಗಮಿಸುತ್ತಿದ್ದು, ಹೆಲಿಪ್ಯಾಡ್‌, ಕಾಂಕ್ರೀಟ್‌ ರಸ್ತೆ, ಭದ್ರತಾ ವ್ಯವಸ್ಥೆ ಸಹಿತ ಮೂಲ ಸೌಲಭ್ಯಗಳ ತಯಾರಿ ವೇಗವಾಗಿ ಸಾಗುತ್ತಿದೆ. ನವೆಂಬರ್ 28 ರಂದು ದೆಹಲಿಯಿಂದ ನೇರವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ…

ಗ್ರಾಮಾಂತರ, ನಗರ ಭಾಗವನ್ನು ಒಂದು ಮಾಡಿಕೊಟ್ಟರೆ ನಾನು ನಾಳೆಯೇ ಜವಾಬ್ದಾರಿ ತೆಗೆದುಕೊಂಡು ಯಾರೇ ಅಭ್ಯರ್ಥಿ ಆಗಲಿ ಪುತ್ತೂರಿನಲ್ಲಿ ಬಿಜೆಪಿಯನ್ನು ಗೆಲ್ಲಿಸಿ ತೋರಿಸುತ್ತೇನೆ- ಹಿಂದೂ ಮುಖಂಡ ಅರುಣ್‌ ಕುಮಾರ್ ಪುತ್ತಿಲ.-PRIME TV

ಪುತ್ತೂರು: ಗ್ರಾಮಾಂತರ ಮತ್ತು ನಗರ ಭಾಗವನ್ನು ಒಂದು ಮಾಡಿಕೊಟ್ಟರೆ ನಾನು ನಾಳೆಯೇ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ಮತ್ತೆ ಈ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಿ ತೋರಿಸುತ್ತೇನೆ ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ. ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವದ…

ಪುತ್ತೂರು: ಪುತ್ತಿಲ ಪರಿವಾರ–ಬಿಜೆಪಿ ನಡುವೆ ಮತ್ತೆ ಅಸಮಾಧಾನ; ಪಕ್ಷದ ಜವಾಬ್ದಾರಿಗಾಗಿ ಅರುಣ್ ಕುಮಾರ್ ಪುತ್ತಿಲ ಒತ್ತಾಯ-PRIME TV

ಪುತ್ತೂರು: ಪುತ್ತಿಲ ಪರಿವಾರ ಮತ್ತು ಬಿಜೆಪಿ ನಡುವೆ ಮತ್ತೆ ಅಸಮಾಧಾನ ವ್ಯಕ್ತವಾಗಿದ್ದು, ಅರುಣ್ ಕುಮಾರ್ ಪುತ್ತಿಲರ ಕಡೆಗಣನೆ ಕುರಿತು ಪುತ್ತಿಲ ಪರಿವಾರದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಅಸಮಾಧಾನ ಸತ್ಯವೆಂದು ಅರುಣ್ ಕುಮಾರ್ ಪುತ್ತಿಲ ತಮ್ಮದೇ ಮಾತಿನಲ್ಲಿ ಒಪ್ಪಿಕೊಂಡಿದ್ದಾರೆ. ಪಕ್ಷದ ಹಿರಿಯರ…

ಪೂರ್ವಾನುಮತಿ ಪಡೆಯದೆ ಸಾರ್ವಜನಿಕರಿಗೆ ಕಿರಿಕರಿಯಾಗುವಂತೆ, ಕರ್ಕಶವಾಗಿ ಧ್ವನಿವರ್ಧಕ ಬಳಕೆಯ ಹಿನ್ನೆಲೆಯಲ್ಲಿ ಪ್ರಕರಣ ದಾಖಲು…!-PRIME TV

ಬಂಟ್ವಾಳ :ದಿನಾಂಕ 22.11.2025 ರಂದು ರಾತ್ರಿ ಬಂಟ್ವಾಳ ಭಂಡಾರಿಬೆಟ್ಟು ಎಂಬಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿ ಹಾಗೂ ಕರ್ಕಶವಾಗಿ ಸಾರ್ವಜನಿಕ ಶಾಂತಿ ನೆಮ್ಮದಿಗೆ ತೊಂದರೆಯಾಗುವಂತೆ ಧ್ವನಿವರ್ಧಕ ಬಳಸುತ್ತಿರುವ ಬಗ್ಗೆ ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ಬಂದ ಮೇರೆಗೆ,ಸದ್ರಿ ಸ್ಥಳಕ್ಕೆ ತೆರಳಿ ನೋಡಲಾಗಿ…

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವತಿಯಿಂದ ಮಾನ್ಯ ಶಾಸಕರರಾದ ಹರೀಶ್ ಪೂಂಜ ರವರನ್ನು ಭೇಟಿ ಮಾಡಿ ಕುಶಲೋಪಚಾರಿ ಮಾತುಕತೆ-PRIME TV

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವತಿಯಿಂದ ಮಾನ್ಯ ಶಾಸಕರರಾದ ಹರೀಶ್ ಪೂಂಜ ರವರನ್ನು ಭೇಟಿ ಮಾಡಿ ಕುಶಲೋಪಚಾರಿ ಮಾತುಕತೆ ನಡೆಸಲಾಯಿತು. ಇದೆ ಸಮಯದಲ್ಲಿ ತನ್ನ ವಾಗ್ದಾನದಂತೆ ವಿಶೇಷ ಅನುದಾನದಲ್ಲಿ ರೂ.1 ಕೋಟಿ ಅನುದಾನವನ್ನು ಮಿಸಲಿರಿಸುವುದಾಗಿ ಶಾಸಕರು ಸಂಪೂರ್ಣ…

ಬೆಂಗಳೂರಲ್ಲಿ ‘ವಂದೇ ಭಾರತ್’ ರೈಲು ಡಿಕ್ಕಿ : ಸ್ಥಳದಲ್ಲೇ ನರ್ಸಿಂಗ್ ವಿದ್ಯಾರ್ಥಿಗಳ ಸಾವು-PRIME TV

ಬೆಂಗಳೂರು: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾದ ಪರಿಣಾಮ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟ ಘಟನೆ ಭಾನುವಾರ ಸಂಜೆ ಚಿಕ್ಕಬಾಣಾವರ ನಿಲ್ದಾಣದ ಬಳಿ ಸಂಭವಿಸಿದೆ. ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿಯಾಗಿ ವಿದ್ಯಾರ್ಥಿ ಜಸ್ಟಿನ್ ಜೋಸೆಫ್ (21) ಹಾಗೂ…

ಡಿಸೆಂಬರ್ 2ನೇ ವಾರ ಬೆಂಗಳೂರಿನಲ್ಲಿ ಕಾಸರಗೋಡು ಸಮ್ಮೇಳನ -PRIME TV

ಮಂಗಳೂರು: ‘ಕಾಸರಗೋಡು ಜಿಲ್ಲೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಡಿಸೆಂಬರ್ 2ನೇ ವಾರ ಬೆಂಗಳೂರಿನಲ್ಲಿ ‘ಕಾಸರಗೋಡು ಸಮ್ಮೇಳನ’ ಆಯೋಜಿಸಲಾಗುವುದು’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು. ‘ಕಾಸರಗೋಡಿನಲ್ಲಿ ಮಲಯಾಳೀಕರಣದ ಸಂಚು ನಡೆಯುತ್ತಿದೆ’ ಎಂದು ಅವರು ಭಾನುವಾರ…

ಸೌದಿಅರೇಬಿಯಾದಲ್ಲಿ ಕುಂಬ್ರ ಕೆಐಸಿ ಎಲೆವೇಶನ್ ಸಮ್ಮಿಟ್ : ಅನಿವಾಸಿ ಭಾರತೀಯರು ಶಿಕ್ಷಣದ ಕಡೆ ಒತ್ತುಕೊಡುತ್ತಿರುವುದು ಅಭಿನಂದನಾರ್ಹ: ಶಾಸಕ ಅಶೋಕ್ ರೈ-PRIME TV

ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ಅವರುಒಂದು ವಾರಗಳ ಗಲ್ಫ್ ರಾಷ್ಟ್ರಗಳ ಪ್ರವಾಸದಲ್ಲಿದ್ದು ಪ್ರವಾಸದ ವೇಳೆ ಸೌದಿ ಅರೇಬಿಯಾದಅಲ್ ಜುಬೈಲ್‌ನಲ್ಲಿ ಕುಂಬ್ರ ಕೆಐಸಿ ಇದರ ಎಲೆವೇಶನ್ ಸಮ್ಮಿಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಜುಬೈಲ್‌ಗೆ ಆಗಮಿಸಿದ ಶಾಸಕರನ್ನು ಅನಿವಾಸಿ ಭಾರತೀಯರು ಅದ್ದೂರಿಯಾಗಿ ಬರಮಾಡಿಕೊಂಡರು. ಎಲೆವೇಶನ್…

ಸುಪ್ರೀಂಕೋರ್ಟ್’ನ 53ನೇ ‘CJI’ ಆಗಿ ನ್ಯಾ.ಸೂರ್ಯಕಾಂತ್ ಪ್ರಮಾಣ ವಚನ ಸ್ವೀಕಾರ-PRIME TV

ನವದೆಹಲಿ : ನ್ಯಾಯಮೂರ್ತಿ ಸೂರ್ಯಕಾಂತ್ ಸೋಮವಾರ ಸುಪ್ರೀಂಕೋರ್ಟ್ 53 ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಪ್ರಮಾಣ ವಚನ ಸ್ವೀಕರಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಬೋಧಿಸಿದ್ದು, ಸುಪ್ರೀಂಕೋರ್ಟ್ 53 ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಪ್ರಮಾಣ ವಚನ…

‘ಕಲೆಯು ಅಮೃತವಾಹಿನಿಯಂತೆ ಗಡಿ ದಾಟಿ‌ ವಿಸ್ತರಿಸಲಿ’ :ನೃತ್ಯ ಗುರು ವಿದುಷಿ ಪ್ರತಿಭಾ ಸಾಮಗ-PRIMETV

ಮಂಗಳೂರು: ಓರ್ವ ವ್ಯಕ್ತಿಯು ಒಲಿಸಿಕೊಂಡ ಕಲೆಯು ನಿರಂತರವಾಗಿ ಅಭಿವೃದ್ಧಿಯಾಗುತ್ತಿರಬೇಕು. ಅದು ಅಮೃತವಾಹಿನಿಯಿಂದ ದೇಶದ ಗಡಿ ದಾಟಿ ವಿಸ್ತರಿಸಬೇಕು ಎಂದು ಕಲಾ ವಿಮರ್ಶಕಿ, ನೃತ್ಯ ಗುರು ವಿದುಷಿ ಪ್ರತಿಭಾ ಸಾಮಗ ಹೇಳಿದರು. ನಗರದ ಕುದ್ಮುಲ್ ರಂಗರಾವ್ ಪುರ ಭವನದಲ್ಲಿ ವಿದುಷಿ ಅಮೃತಾ ವಿ.…