ಪುತ್ತೂರು: ಇರ್ದೆ ಸೀರೆ ಹೊಳೆಯ ಸಮೀಪದಲ್ಲಿರುವ ಭಾವೈಕ್ಯ ಕೇಂದ್ರವಾದ ಇರ್ದೆ-ಪಳ್ಳತ್ತಡ್ಕ ದರ್ಗಾ ಶರೀಫ್‌ನಲ್ಲಿ 50ನೇ ವರ್ಷದ ಉರೂಸ್ ಮುಬಾರಕ್ ಹಾಗೂ ಏಳು ದಿನಗಳ ಧಾರ್ಮಿಕ ಮತ ಪ್ರಭಾಷಣವು ಏಪ್ರಿಲ್ 5ರಿಂದ 11ರವರೆಗೆ ನಡೆಯಲಿದೆ ಎಂದು ಕೊರಿಂಗಿಲ ಜುಮಾ ಮಸೀದಿ ಉಪಾಧ್ಯಕ್ಷ ಆಲಿಕುಂಞ ಹಾಜಿ ಕೊರಿಂಗಿಲ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉರೂಸ್ ಮುಬಾರಕ್ ಅಂಗವಾಗಿ ಪ್ರತಿದಿನ ರಾತ್ರಿ ಧಾರ್ಮಿಕ ಪ್ರಭಾಷಣಗಳು ನಡೆಯಲಿವೆ. ಏಪ್ರಿಲ್ 5ರಂದು ನಡೆಯುವ ಉದ್ಘಾಟನಾ ಸಮಾರಂಭವನ್ನು ಅಲ್‌ಹಾಜ್ ಅಸ್ಸಯ್ಯದ್ ಕೆ.ಎಸ್. ಆಲಿ ತಂಜಳ್ ಕೊಂಬೋಲ್ ಉದ್ಘಾಟಿಸಲಿದ್ದು, ಕೊರಿಂಗಿಲ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಕುಂಞ ಹಾಜಿ ಕೊರಿಂಗಿಲ ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್‌ಹಾಜ್ ಸಯ್ಯಯ್ಯದ್ ಹಾಶಿಂ ಬಾಅಲವಿ ತಂಜಲ್ ದುವಾ ನೆರವೇರಿಸಲಿದ್ದು, ಲುಕ್ಕಾನುಲ್ ಹಕೀಂ ಸಖಾಫಿ ಪುಲ್ಲಾರ ಮುಖ್ಯ ಪ್ರಭಾಷಣ ನೀಡಲಿದ್ದಾರೆ.
ಎಪ್ರಿಲ್ 6ರಂದು ಎ.ಎಂ. ನೌಶಾದ್ ಬಾಖವಿ (ತಿರುವನಂತಪುರಂ), ಎಪ್ರಿಲ್ 7ರಂದು ಇ.ಪಿ. ಅಬೂಬಕ್ಕರ್ ಅಲ್ ಖಾಸಿಮಿ (ಪತ್ತನಾಪುರ, ಕೇರಳ), ಎಪ್ರಿಲ್ 8ರಂದು ಡಾ| ಹಾಫಿಳ್ ಜುನೈದ್ ಚೌಹರಿ (ಕೊಲ್ಲಂ), ಎಪ್ರಿಲ್ 9ರಂದು ಪೇರೋಡ್ ಮುಹಮ್ಮದ್ ಅಝರಿ (ಕೇರಳ) ಧಾರ್ಮಿಕ ಪ್ರಭಾಷಣ ನೀಡಲಿದ್ದಾರೆ.

ಎಪ್ರಿಲ್ 10ರಂದು ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದಸ್ ಅಲ್ ಹಾಜ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಬಳ್ ದುವಾ ಆಶೀರ್ವಚನ ನೀಡಲಿದ್ದು, ಕಾಸರಗೋಡು ಮೆಲ್ವರಂಬ್ ಅಶ್ರಫ್ ರಹ್ಮಾನಿ ಚೌಕಿ ಪ್ರಭಾಷಣ ಮಾಡಲಿದ್ದಾರೆ. ಎಪ್ರಿಲ್ 11ರಂದು ಸಂಜೆ ಕೊರಿಂಗಿಲ ಜುಮಾ ಮಸೀದಿಯ ಖತೀಬ ಅಲ್‌ಹಾಜ್ ಜಿ.ಎಚ್. ಅಯ್ಯಬ್ ವಹಬಿ ನೇತೃತ್ವದಲ್ಲಿ ಉರೂಸ್ ಸಮಾರೋಪ ನಡೆಯಲಿದೆ. ಸಂಜೆ 5 ಗಂಟೆಗೆ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಕೆ.ಎಂ.ಎ. ಕೊಡುಂಗೈ ಫಾಝಿಲ್ ಹನೀಫಿ ದಿಕ್ಕೂಚಿ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ನ್ಯಾಯವಾದಿ ರಾಧಾಕೃಷ್ಣ ರೈ ಆನಾಜೆ, ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ 9 ಗಂಟೆಗೆ ಶಮೀರ್ ದಾರಿಮಿ (ಕೊಲ್ಲಂ) ಪ್ರಭಾಷಣ ನೀಡಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕೊರಿಂಗಿಲ ಮಸೀದಿ ಅಧ್ಯಕ್ಷ ಮಹಮ್ಮದ್ ಕುಂಞ, ಉರೂಸ್ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕೊರಿಂಗಿಲ, ಪ್ರಧಾನ ಕಾರ್ಯದರ್ಶಿ ಮೂಸಕುಂಞ ಬೆಟ್ಟಂಪಾಡಿ ಹಾಗೂ ಸಲಹಾ ಸಮಿತಿ ಸದಸ್ಯ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *